ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು,
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು,
ಕಾಯಿಸಿದರೂ♪♪ ನೋಯಿಸಿದರು
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸ ಬಾರದು
ಕೋಪಿಸಿದರು ♪♪ ನಿಂದಿಸಿದರು
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕಾಯಿಸುವುದು ಸತಾಯಿಸುವುದು
ಹೆಣ್ಣುಗಳ ಕಲೆ ತಾನೇ
ಪ್ರೀತಿಗದು ಬಲೆ ತಾನೇ
ಕೋಪಿಸುವುದು ಚುಡಾಯಿಸುವುುದು
ಗಂಡುಗಳ ಕಲೆ ತಾನೇ
ಪ್ರೀತಿಗದು ಸೆಲೆ ತಾನೇ
ಕೂಗುವಿರಿ ಓಡಾಡಿಸುವಿರಿ
ಓರೆಗೆ ಹಚ್ಚಿ ಬೇಯಿಸುವಿರಿ
ಹೊಗಳುವಿರಿ ಮೈ ಮರೆಸುವಿರಿ
ಅಟ್ಟಕ್ಕೆ ಎತ್ತಿ ಬೀಳಿಸುವಿರಿ
ನಿಜವಾಗಿ ನಾನು ಅಂತ ಹುಡುಗನು ಅಲ್ಲ
ನಿಜವಾಗಿ ನಾನು ಅಂತ ಹುಡುಗಿಯು ಅಲ್ಲ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸ
ನಿಜವಾಗಿ ನಾನು ನಿನ್ನ ಪ್ರೀತಿಯ ದಾಸಿ
ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು,
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸ ಬಾರದು
ಕಾಯಿಸಿದರು
ನಿಂದಿಸಿದರು
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕಣ್ಣುಗಳಲಿ ಕಪಟ ಕಾಣದು
ಕಣ್ಣು ಮುಚ್ಚಿ ನಂಬ ಬಹುದು
ಅಂತರಂಗ ನೋಡಬಹುದು
ಸನ್ನೆಗಳಲಿ ಸನ್ನಾಹ ಕಾಣದು
ಮನ ಬಿಚ್ಚಿ ತೋರಬಹುದು
ಸ್ನೇಹ ಸಂಗ ಮಾಡ ಬಹುದು
ನಾಚುವುದು ಹಿಂಬಾಲಿಸುವುದು
ಪ್ರೀತಿಯ ಆಳ ತೋರಿಸುವುದು
ಅಂಜುವುದು ಅನುಮಾನಿಸುವುದು
ಪ್ರೀತಿಗೆ ಸಹಿ ಹಾಕಿಸುವುದು
ಕಾಯೋದು ಕಾಯಿಸೋದು ವಿರಹದ ಪ್ರೇಮ
ಕಾಯುತ್ತ ಕನವರಿಸೋದು ಕನಸಿನ ಪ್ರೇಮ
ತಾಂಬೂಲ ಸೀರೆ ತಂದು ಮಾತಿಗೆ ಕೂಗು
ಸುಖವಾಗಿ ನನ್ನ ನಂಬಿ ಮದುವೆ ಯಾಗು
ಕೋಪಿಸುವ ಹುಡುಗರನು
ಯಾರು ಪ್ರೀತಿಸಬಾರದು
ಪ್ರೀತಿಸುವ ಹುಡುಗಿಯರ
ಯಾರು ನಿಂದಿಸ ಬಾರದು
ಕೋಪಿಸಿದರು ♪♪ ನಿಂದಿಸಿದರು
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ
ಕಾಯಿಸುವ ಹುಡುಗಿಯರ
ಯಾರು ಪ್ರೀತಿಸಬಾರದು,
ಪ್ರೀತಿಸುವ ಹುಡುಗರನು
ಯಾರು ನೋಯಿಸಬಾರದು,
ಕಾಯಿಸಿದರೂ♪♪ ನೋಯಿಸಿದರು
ನಾನು ನಿನ್ನ ಪ್ರೀತಿಸುವೆ
ನಾನು ನಿನ್ನ ಪ್ರೀತಿಸುವೆ