menu-iconlogo
huatong
huatong
เนื้อเพลง
บันทึก
ಮಲ್ಲೇ ಹೂವ ಚಂದಾನೋ ನನ್ನ ಹುಡುಗಿ ಚಂದಾನೋ

ಮಾತಾಡೋ ಮಲ್ಲಿ ನೀನೇ ಚಂದಾನೋ

ರೇಷ್ಮೆ ಸೀರೆ ಚಂದಾನೋ ನನ್ನ ಹುಡುಗಿ ಚಂದಾನೋ

ನಿನ್ನ ಮೈಯಾಮೇಲೆ ರೇಷ್ಮೆ ಚಂದಾನೋ

ನನ್ನಾ ಹೋಗಳಿ ಉಪ್ಪರಿಗೆ ಮೇಲೆ ಕೂರಿಸಿ

ರೆಕ್ಕೆ ಬೆಳೆದು ಹಾರಿಹೋದೆರೆ ಏನು ಮಾಡುವೆ

ಆ ವಿರಹದ ಗೂಡಲ್ಲಿ ನೆನಪಿನಲೇ ಕಾಯುವೇ

ಆಕಾಶಕ್ಕೆ ಸೂರ್ಯನೋ ಸೂರ್ಯಂಗೆ ಆಕಾಶನೋ

ಬಿಡಿಸಲು ಆಗದ ಒಗಟು ಕೇಳಮ್ಮೋ

ನಿನ್ನ ಪ್ರಾಣ ನಾನು ನನ್ನ ಪ್ರಾಣ ನೀನು

ಬಿಡಿಸಲು ಆಗದ ನಂಟು ಕೇಳಮ್ಮೋ

ನಿನ್ನ ಯಾರು ನೋಡಬಾರದು

ನೋಡಿದರೆ ಕಣ್ಣು ಕೀಳುವೆ

ಜೋಪಾನ ಕೇಳೇ ಜೋಪಾನ

ಕಂಡೊಡನೆ ಪ್ರೀತಿನ ಕಟ್ಟಬೇಡ ಆಸೆನ

ಜೋಪಾನ ಕೇಳೋ ಜೋಪಾನ

ಹೂವು ಅರಳೋದು ಒಂದೇ ಸಾರಿನೇ

ಹೂವು ಬಾಡೋದು ಕೂಡಾ ಒಂದೇ ಸಾರಿನೇ

ಪ್ರೀತಿ ಎಂದೂ ಬಾಡದ ಹೂ ತಿಳಿದುಕೊಳ್ಳೆಲೇ ಲೇ ಲೇ ಲೇ

ಮಲ್ಲೇ ಹೂವ ಚಂದಾನೋ ನನ್ನ ಹುಡುಗಿ ಚಂದಾನೋ

ಮಾತಾಡೋ ಮಲ್ಲಿ ನೀನೇ ಚಂದಾನೋ

ರೇಷ್ಮೆ ಸೀರೆ ಚಂದಾನೋ ನನ್ನ ಹುಡುಗಿ ಚಂದಾನೋ

ನಿನ್ನ ಮೈಯಾಮೇಲೆ ರೇಷ್ಮೆ ಚಂದಾನೋ

ನನ್ನಾ ಉಸಿರಲ್ಲೇ ನಾ ಕಟ್ಟುವೇ ಒಂದು ಕೋಟೇನ

ನಿನ್ನಾಣೆ

ಸುಳ್ಳಲ್ಲಾ

ಆ ನಿನ್ನ ಕೋಟೆ ಕನಸಲ್ಲೇಉಳಿಯುವುದಷ್ಟೇ

ಕನಸು

ಕನಸು ಕಾಣ್ಬೇಡ

ಆಕಾಶದಲಿ ಕಾಮನಬಿಲ್ಲು ಕಾಣೋದು ಕನಸೇ

ಏಟುಕದ ಆಕಾಶಕ್ಕೆ ಏಣಿ ಹಾಕೋದು ಕನಸೇ

ಕನಸು ಕನಸಾಗೆ ಮರೆತು ಬಿಡೋ ನೀನು

เพิ่มเติมจาก V. Balasubrahmanyam/L. N. Shastri/K. S. Chithra

ดูทั้งหมดlogo