menu-iconlogo
huatong
huatong
avatar

Kannadave Nammamma

Vishnuvardhanhuatong
เนื้อเพลง
บันทึก

ಕನ್ನಡದ ಸಿದ್ದ

ಹಾಡೋದಕ್ಕೆ ಎದ್ದ

ಕನ್ನಡಕೆ ಇವನು

ಸಾಯೋದಕ್ಕೂ ಸಿದ್ದ

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.... ದೇವರಿವಳು,

ನಮ್ಮ ಕಾಪಾಡೋ.... ಗುರು ಇವಳು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ.... ನೀರಿವಳು,

ನಾ ಉಸಿರಾಡೋ ಕಾಡಿವಳು

ლ ლ ლ ლ

ಬರೆಯೋರ ತವರೂರು

ಕಡೆಯೋರ ಹಿರಿಯೂರು

ನಟಿಸೋರ ನವಿಲೂರು

ನುಡಿಸೋರ ಮೈಸೂರು

ಕೂಗಿದರೆ ಕಾಣುವುದು

ಎದೆ ತುಂಬಾ ಹಾಡಾಗುವುದು

ಮಧುರ ಮಧುರ ಇದು ಅಮರ ಅಮರ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.... ದೇವರಿವಳು,

ನಮ್ಮ ಕಾಪಾಡೋ.... ಗುರು ಇವಳು

ಈ ಭಾಷೆ ಕಲಿಯೋದು

ಬೆಣ್ಣೆಯ ತಿಂದಂತೆ

ನಮ್ಮ ಭಾಷೆ ಬರೆಯೋಕೆ

ಹಾ ಕಲಿಸೋರೆ ಬೇಡಂತೆ

ಹಾಡಿದರೆ ತಿಳಿಯುವುದು

ಮೈ ತುಂಬಾ ಓಡಾಡುವುದು

ಸರಳ ಸರಳ ಇದು ವಿರಳ ವಿರಳ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.... ದೇವರಿವಳು,

ನಮ್ಮ ಕಾಪಾಡೋ.... ಗುರು ಇವಳು

ϟ ϟ ϟ ϟ ϟ

ಅಭಿಮಾನ ಹಾಲಂತೆ

ದುರಭಿಮಾನ ವಿಷವಂತೆ

ಸಹಿಸೋರು ನಾವಂತೆ

ನಿರಭಿಮಾನ ಬೇಡಂತೆ

ಕನ್ನಡತಿ ಆಜ್ಞೆ ಇದು

ಅವಳೆದೆಯ ಹಾಡು ಇದು

ಅವಳ ಬಯಕೆ ಇದು ನಮಗೆ ಹರಕೆ ಇದು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ಮಾತಾಡೋ.... ದೇವರಿವಳು,

ನಮ್ಮ ಕಾಪಾಡೋ.... ಗುರು ಇವಳು

ಕನ್ನಡವೇ ನಮ್ಮಮ್ಮ

ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ.... ನೀರಿವಳು,

ನಾ ಉಸಿರಾಡೋ ಕಾಡಿವಳು

ಸಿದ್ಧವೋ ಸಿದ್ಧವೋ

ಕನ್ನಡಕ್ಕೆ ಸಾಯಲು

ಸಿದ್ಧವೋ ಬದ್ಧವೋ

ಕನ್ನಡಕ್ಕೆ ಬಾಳಲು

›››››››››››››››››

เพิ่มเติมจาก Vishnuvardhan

ดูทั้งหมดlogo