menu-iconlogo
logo

Jenina Holeyo

logo
Şarkı Sözleri
ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ವಾಣಿಯ ವೀಣೆಯ ಸ್ವರ ಮಾಧುರ್ಯವೊ

ಸುಮಧುರ ಸುಂದರ ನುಡಿಯೊ ... ಆಹ

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ

(ದ ಪ ದ ... ರಿ ಸ ರಿ ... )

(ಗ ಪ ಪ ದ ಸ ರಿ ದ ಸ )

ಸವಿ ನುಡಿ ತಣ್ಣನೆ ಗಾಳಿಯ ಹಾಗೆ

ಕವಿ ನುಡಿ ಕೋಗಿಲೆ ಹಾಡಿದ ಹಾಗೆ

ಸವಿ ನುಡಿ ತಣ್ಣನೆ ಗಾಳಿಯ ಹಾಗೆ

ಒಲವಿನ ಮಾತುಗಳಾಡುತಲಿರಲು

ಮಲ್ಲಿಗೆ ಹೂಗಳು ಅರಳಿದ ಹಾಗೆ

ಮಕ್ಕಳು ನುಡಿದರೆ ಸಕ್ಕರೆಯಂತೆ

ಅಕ್ಕರೆ ನುಡಿಗಳು ಮುತ್ತುಗಳಂತೆ

ಪ್ರೀತಿಯ ನೀತಿಯ ಮಾತುಗಳೆಲ್ಲ

ಸುಮಧುರ ಸುಂದರ ನುಡಿಯೊ ... ಆಹ

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ಆಹಾಹ ...

ಕುಮಾರ ವ್ಯಾಸನ ಕಾವ್ಯದ ಚಂದ

ಕವಿ ಸರ್ವಜ್ಞನ ಪದಗಳ ಅಂದ

ಕುಮಾರ ವ್ಯಾಸನ ಕಾವ್ಯದ ಚಂದ

ಕವಿ ಸರ್ವಜ್ಞನ ಪದಗಳ ಅಂದ

ದಾಸರು ಶರಣರು ನಾಡಿಗೆ ನೀಡಿದ

ಭಕ್ತಿಯ ಗೀತೆಗಳ ಪರಮಾನಂದ

ರನ್ನನು ರಚಿಸಿದ ಹೊನ್ನಿನ ನುಡಿಯು

ಪಂಪನು ಹಾಡಿದ ಚಿನ್ನದ ನುಡಿಯು

ಕನ್ನಡ ತಾಯಿಯು ನೀಡಿದ ವರವು

ಸುಮಧುರ ಸುಂದರ ನುಡಿಯೊ ... ಆಹ

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ವಾಣಿಯ ವೀಣೆಯ ಸ್ವರ ಮಾಧುರ್ಯವೊ

ಸುಮಧುರ ಸುಂದರ ನುಡಿಯೊ ... ಆಹ

ಜೇನಿನ ಹೊಳೆಯೊ ಹಾಲಿನ ಮಳೆಯೊ

ಸುಧೆಯೊ ಕನ್ನಡ ಸವಿ ನುಡಿಯೊ

ಸುಧೆಯೊ ಕನ್ನಡ ಸವಿ ನುಡಿಯೊ ...

Dr.RajKumar, Jenina Holeyo - Sözleri ve Coverları