ನೀ ಅಮೃತಧಾರೆ
ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ
ಇಹಕು ಪರಕು ಸಂಗಾ....ತಿ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ?....
ಹೇ! ಪ್ರೀತಿ ಹುಡುಗ
ಕೋಟಿ ಜನುಮ ಜೊತೆಗಾರ
ಹೇ! ಪ್ರೀತಿ ಹುಡುಗ
ನನ್ನ ಬಾಳ ಕಥೆಗಾ....ರ
ನೀ ಇಲ್ಲವಾದರೆ ನಾ.. ಹೇಗೆ ಬಾಳಲೀ?...
ಹೇ! ಪ್ರೀತಿ ಹುಡುಗಾ...
ನೆನಪಿದೆಯೆ ಮೊದಲ ನೋಟ?
ನೆನಪಿದೆಯೆ ಮೊದಲ... ಸ್ಪರ್ಶ?.....
ನೆನಪಿದೆಯೆ ಮತ್ತನು ತಂದ
ಆ ಮೊದಲ ಚುಂಬನಾ?
ನೆನಪಿದೆಯೆ ಮೊದಲ ಕನಸು?
ನೆನಪಿದೆಯೆ ಮೊದಲ.....ಮುನಿಸೂ?....
ನೆನಪಿದೆಯೆ ಕಂಬನಿ ತುಂಬಿ
ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ.. ಹೇ..ಗೆ ಬಾಳಲೀ?...
(M)ನೀ ಅಮೃತಧಾರೆ,
ಕೋಟಿ ಜನುಮ ಜೊತೆಗಾತೀ
ನೀ ಅಮೃತಧಾರೆ, ಇಹಕು ಪರಕು ಸಂಗಾ...ತಿ
ನೀ ಅಮೃತಧಾ....ರೆ ..
(F) ನೆನಪಿದೆಯೆ ಮೊದಲ ಸರಸ?
ನೆನಪಿದೆಯೆ ಮೊದಲ....ವಿರಸಾ..?
ನೆನಪಿದೆಯೆ ಮೊದಲು ತಂದ
ಸಂಭ್ರಮದ ಕಾಣಿಕೆ?
(M) ನೆನಪಿದೆಯೆ ಮೊದಲ ಕವನ?
ನೆನಪಿದೆಯೆ ಮೊದಲ... ಪಯಣಾ?...
ನೆನಪಿದೆಯೆ ಮೊದಲ ದಿನದ,
ಭರವಸೆಯ ಆಸರೆ?
ನೀ ಇಲ್ಲವಾದರೆ ನಾ ಹೇ....ಗೆ ಬಾಳಲೀ?.....
(F) ಹೇ! ಪ್ರೀತಿ ಹುಡುಗ
ಕೋಟಿ ಜನುಮ ಜೊತೆಗಾ...ರ
(M)ನೀ ಅಮೃತಧಾರೆ ಇಹಕು ಪರಕು ಸಂಗಾ....ತಿ,
(M F) ನೀ ಇಲ್ಲವಾದರೆ ನಾ....
ಹೇಗೆ ಬಾಳಲೀ?
ನೀ ಅಮೃತಧಾ.......ರೆ!
(S) ರವಿ ಎಸ್ ಜೋಗ್ (S)