ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಹನಿ ಹನಿಯ ಸವಿ ದನಿಯ ನಾ ವಿವರಿಸಿ ಹೇಳಲ
ಹು..ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಅದೇ ಅದೇ ಮೋಡವೀಗ
ವಿನೂತನ ರೂಪ ತಾಳಿ ನಿನ್ನ ಸೋಕಿದೆ
ಪದೇ ಪದೇ ಗಂಧ ಗಾಳಿ
ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನ ಕೊಡೆಯನು ಮನಸಲೆ ಬಿಡಿಸಲು
ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಇದೇನಿದು ಮೂಕ ಭಾವ
ತಯಾರಿಯೇ ಇಲ್ಲದೇನೆ ನನ್ನ ಕಾಡಿದೆ
ನಿವೇದನೆ ಆದ ಮೇಲು
ಸತಾಯಿಸ ಬೇಕು ನೀನು ನನ್ನ ನೋಡದೆ
ಸಿಡಿಲಿನ ಇರುಳಲು ಪಿಸುನುಡಿ ಕೇಳಲು
ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ
ಹನಿ ಹನಿಯ ಸವಿ ದನಿಯ ನಾ ವಿವರಿಸಿ ಹೇಳಲ
ಓ...ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ ಹೊ ತುಂಬ ಕುತೂಹಲ..