* * * * * * * * * * * 
ಚಿತ್ರ : ನಾಗರ ಹೊಳೆ 
ಹಾಡು : ಈ ನೋಟಕೆ 
ಸಾಹಿತ್ಯ: ಚಿ .ಉದಯಶಂಕರ್ 
ಸಂಗೀತ : ಸತ್ಯಂ 
ಮೂಲ ಗಾಯನ : ವಿಷ್ಣುವರ್ಧನ್ & ಭಾರತಿ 
ಅಪ್ಲೋಡ್ : ಪ್ರಸನ್ನ ಶರ್ಮ (SM ID: 13289359164) 
* * * * * * * * * * * 
(M) ಈ ನೋಟಕೆ ಮೈಮಾಟಕೆ 
ನಾ ಸೋತೆ ಈ ಸ್ನೇಹಕೆ 
ಬಿಡಲಾರೆ ಬಳಿ ಬಾರೆ 
ಈ ದೂರ ಇನ್ನೇತಕೆ 
(F) ಈ ನೋಟಕೆ ಸವಿ ಮಾತಿಗೆ 
ನಾ ಸೋತೆ ಈ ಸ್ನೇಹಕೆ 
ನಿನಗಾಗಿ ಹೊಸದಾಗಿ 
ನಾ ತಂದೆ ಈ ಕಾಣಿಕೆ 
(M) ಆ... ಹಾ ....ಅಹ 
(F) ಆ... ಹಾ ....ಅಹ 
* * * * * * * * * * * 
(F) ನಿಜವಾಯ್ತು ನಾ ಕಂಡು ನಿನ್ನಾ 
ತೋಳಿಂದ ಬಳಸೀಗ ನನ್ನಾ 
(M) ಹೇ ಹೇ ..ಬಿಡಲಾರೆ ಇನ್ನೆಂದು ನಿನ್ನಾ 
ನಿನಗಿಂತ ಯಾರಿಲ್ಲ ಚಿನ್ನಾ 
(F) ಹೊಸದಾದ 
(M) ಹೊಸದಾದ 
(F) ಆನಂದ 
(M) ಹುಂ 
(F) ನಿನ್ನಿಂದ ನಾ ಕಂಡೆನು.. ಉ ಉ ಉ 
(M) ಈ ನೋಟಕೆ ಮೈಮಾಟಕೆ 
ನಾ ಸೋತೆ ಈ ಸ್ನೇಹಕೆ 
ಬಿಡಲಾರೆ 
(F) ಬಿಡಲಾರೆ 
(M) ಬಳಿ ಬಾರೆ 
(F) ಹುಂ ಹುಂ 
(M) ಈ ದೂರ ಇನ್ನೇತಕೆ 
(F) (ನಗು) ಅಹ್ಹಹಾ 
* * * * * * * * * * * 
 (M) ಎಲ್ಲಿಂದಲೋ ನೀನು ಬಂದೇ 
ಅನುರಾಗದ ಜೇನ ತಂದೆ 
(F) ಆ ಆ ಆ ಆ ಆ 
ನನಗಾಗಿಯೇ ನೀನು ಬಂದೇ 
ನನ್ನಲ್ಲಿ ನೂರಾಸೆ ತಂದೆ 
(M) ಹೇ.... ನನ್ನನ್ನೇ 
(F) ನಿನ್ನನ್ನೇ 
(M) ನಾ ಮರೆತೇ 
(F) ಹುಂಹುಂ 
(M) ನಿನ್ನಲ್ಲಿ ಒಂದಾದೆನು...ಉ ಉ ಉ ಉ 
(F) ಈ ನೋಟಕೆ 
ಸವಿ ಮಾತಿಗೆ 
ನಾ ಸೋತೆ ಈ ಸ್ನೇಹಕೆ 
ನಿನಗಾಗಿ 
(M) ನನಗಾಗಿ 
(F) ಹೊಸದಾಗಿ 
(M) (ನಗು) ಅಹ್ಹಹಾ 
(F) ನಾ ತಂದೆ ಈ ಕಾಣಿಕೆ 
(M) ಈ ದೂರ ಇನ್ನೇತಕೆ 
* * * * * * * * * * *