menu-iconlogo
huatong
huatong
avatar

Male ninthu Hoda mele Duet

꧁ಮೊದಲಾಸಲ💞ಯಶು꧂huatong
modalasala_yashuhuatong
بول
ریکارڈنگز
꧁ಮೊದಲಾಸಲ?ಯಶು꧂

F ಮಳೆ ನಿಂತು ಹೋದ ಮೇಲೆ

ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದ ಮೇಲೆ

ದನಿಯೊಂದು ಕಾಡಿದೆ

ಹೇಳುವುದು ಏನೋ ಉಳಿದು ಹೋಗಿದೆ

ಹೇಳಲಿ ಹೇಗೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ

ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದ ಮೇಲೆ

ದನಿಯೊಂದು ಕಾಡಿದೆ

Music

F ನೋವಿನಲ್ಲಿ ಜೀವ ಜೀವ ಅರಿತ ನಂತರ

ನಲಿವು ಬೇರೆ ಏನಿದೆ ಬೇಕೆ ಅಂತರ

ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ

ಒಂದೇ ಸಾರಿ ನೀ ಕೇಳೆಯಾ

ಈ ಸ್ವರ

ಮನಸಲ್ಲಿ ಚೂರು ಜಾಗ ಬೇಕಿದೆ

ಕೇಳಲಿ ಹೇಗೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ

ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದ ಮೇಲೆ

ದನಿಯೊಂದು ಕಾಡಿದೆ

Music

M Huuum Huuumm

Huuum huummm Huuumm huum huumm

ಕಣ್ಣು ತೆರೆದು ಕಾಣುವ ಕನಸೇ ಜೀವನ

ಸಣ್ಣ ಹಠವ ಮಾಡಿದೆ

ಹೃದಯ ಈ ದಿನ

ಎದೆಯ ದೂರವಾಣಿಯ ಕರೆಯ ರಿಂಗಣ

ಕೇಳು ಜೀವವೇ ಏತಕೀ ಕಂಪನ

ಹೃದಯವು ಇಲ್ಲೇ ಕಳೆದುಹೋಗಿದೆ

ಹುಡುಕಲೇಬೇಕೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ

ಹನಿಯೊಂದು ಮೂಡಿದೆ

ಮಾತೆಲ್ಲ ಮುಗಿದ ಮೇಲೆ

ದನಿಯೊಂದು ಕಾಡಿದೆ

ಹೇಳುವುದು ಏನೋ ಉಳಿದು ಹೋಗಿದೆ

ಹೇಳಲಿ ಹೇಗೆ ತಿಳಿಯದಾಗಿದೆ

꧁ಮೊದಲಾಸಲ?ಯಶು꧂

꧁ಮೊದಲಾಸಲ💞ಯಶು꧂ کے مزید گانے

تمام دیکھیںlogo
Male ninthu Hoda mele Duet بذریعہ ꧁ಮೊದಲಾಸಲ💞ಯಶು꧂ - بول اور کور