ಚಿತ್ರ: ಕೆರಳಿದ ಸಿಂಹ
ಗಾಯನ: ಡಾ ರಾಜ್ ಮತ್ತು ಪಿ ಬಿ ಎಸ್
ಅಪ್ಲೋಡ್: ರವಿ ಎಸ್ ಜೋಗ್
ಸುಜಾತ ರವರ ಸಹಾಯದೊಂದಿಗೆ...
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೆ ಬೇ..ಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ
ಬಾಡದ ತಾವರೆ ಹೂ..ವಿನ ಹಾಗೆ
ಎಂದಿಗು ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ
ಆ ಧೃವ ತಾರೆಯೆ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು
ಬೇರೆ ಏನು ಬೇಡೆವು ನಾವು
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...
ಸಂಜೆಯ ಗಾಳಿಯ ತಂಪಿನ ಹಾಗೆ
ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ
ನಮ್ಮನು ಸೇರಿ ಎಂದಿಗು ಹೀಗೆ
ನಗುತಲಿ ಒಂದಾಗಿ ನೀನಿರಬೇಕು
ನಿನ್ನ ನೆರಳಲಿ ನಾವಿರಬೇಕು
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...
ಸಾವಿರ ನದಿಗಳು ಸೇರಿದರೇನು
ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು
ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು
ಬೇರು ಪೂಜೆ ಏತಕೆ ಬೇಕು
ಅಮ್ಮ ನೀನು ನಮಗಾಗಿ
ಸಾವಿರ ವರುಷ ಸುಖವಾಗಿ.
ಬಾಳಲೆ ಬೇಕು ಈ ಮನೆ ಬೆಳಕಾಗಿ.
ಅಮ್ಮ ನೀನು ನಮಗಾಗಿ....
ಸಾವಿರ ವರುಷ ಸುಖವಾಗಿ.....
ರವಿ ಎಸ್ ಜೋಗ್