S1:hm..hm hm hm..hm hm..
hm.. hm hm..
oho ho.. ho ho..
haa..ha ha haa haa..
S2:ಅರಳಿದೆ ತನು ಮನ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾ aa
S1:ಅರಳಿದೆ ತನು ಮನ ನೋಡುತ ನಿನ್ನಾ
ಹೊಸತನ ನನ್ನಲ್ಲಿಯೇ ಕಂಡೆನು ನಾ aa
S2:ಅರಳಿದೆ ತನು ಮನ
S1:ನೋಡುತ ನಿನ್ನಾ
S1:ಚಲಿಸುವ ತಂಗಾಳಿಯು ಚೆಲುವೆ ನಿನ್ನಾ ನೋಡಿ
ನಲಿಯುತ ಓಡಿದೆ ಮುಂಗುರಳ ಬಿಗಿದು ಆಡಿ
S2:ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನಾ ಅಂದ ನೋಡಿ
S1:ಸುಖ ತರುತಿದೆ
S2:ಹಿತ ಸವಿದಿದೆ ಚೆಲುವ....
S1:ಅರಳಿದೆ ತನು ಮನ
S2:ನೋಡುತ ನಿನ್ನಾ
S2:ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನಾ ನೋಡಿ
S1:ಪ್ರಣಯದ ಸಂಗೀತದ ಇಂಪು ಕಿವಿಯಾ ತುಂಬಿ
ಕನಸನು ಕಂಡೆನು ಸಂಗಾತಿಯೆ ನಿನ್ನಾ ಸೇರಿ
S2: ಇನ್ನು ಬಿಡುವೆನೆ
S1:ನನ್ನೇ ಕೊಡುವೆನಾ ಚೆಲುವೇ.. e..
S2: ಅರಳಿದೆ ತನು ಮನ ನೋಡುತ ನಿನ್ನಾ
S1: ಹೊಸತನ ನನ್ನಲ್ಲಿಯೇ ಕಂಡೆನು ನಾ aa..
C:uhm uhm uhm
u..hm hm..