menu-iconlogo
logo

Andavo Andavu Kannada Naadu

logo
بول
ಅಂದವೋ ಅಂದವು ಕನ್ನಡ ನಾಡು

ನನ್ನ ಗೂಡು ಅಲ್ಲಿದೆ ನೋಡು

ಚಂದವೋ ಚಂದವು ನನ್ನಯ ಗೂಡು

ನನ್ನ ಹಾಡು ಅಲ್ಲಿದೆ ನೋಡು

ಕಾವೇರಿ ಹರಿವಳು,ನನ್ನ ಮನೆಯ ಅಂಗಳದಲ್ಲಿ

ಕಸ್ತೂರಿ ಮೆರೆವಳು,ನನ್ನ ಮಡದಿ ಮಲ್ಲಿಗೆಯಲ್ಲಿ

ಅಂದವೋ ಅಂದವು ಕನ್ನಡ ನಾಡು

ನನ್ನ ಗೂಡು ಅಲ್ಲಿದೆ ನೋಡು

ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ

ದಿನವು ನೂರು ಶಶಿಯು ಹುಟ್ಟಿ ಬಂದರೂ

ನನ್ನ ರತಿಯ ಮೊಗವ ಮರೆಮಾಚದಂತ ನಗುವ

ಅವನೆಂದು ತಾರಲಿಲ್ಲವೇ ಪ್ರಿಯೇ ಓಹೋ

ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ

ಕೋಟಿ ಪಕ್ಷಿ ಕೂಗು ಕೇಳಿ ಬಂದರೂ

ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು

ಆ ರಾಗ ನೋಟ ಕಾಣದೇ ಪ್ರಿಯೇ ಹೇಹೇ

ಸಹ್ಯಾದ್ರಿ ಕಾಯ್ವಳು,

ನನ್ನ ಮನೆಯ ಕರುಣೆಯಮೇಲೆ

ಆಗುಂಬೆ ನಗುವಳು,

ನನ್ನ ಮಡದಿ ನೊಸಲಿನ ಮೇಲೆ

ಅಂದವೋ ಅಂದವು ಕನ್ನಡ ನಾಡು

ನನ್ನ ಗೂಡು ಅಲ್ಲಿದೆ ನೋಡು

ಒಯ್ಯ ಒಯ್ಯ ಒಯ್ಯಒಯ್ಯ..

ಲಲಲ ಲಲಲ ಲಲ ಲ ಲಲ ಲ..

ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ

ಇಂದು ನಾಳೆ ಸಿಹಿಯ ಸ್ನೇಹವೆಂಬುದು

ಆಂತರಾಳವೆಂಬ ನೇತ್ರಾವತಿಯ ತುಂಬ

ಈ ಸ್ನೇಹ ಜಲದ ಸೆಲೆಯು ನಿಲ್ಲದೋ ಹೇಹೇ

ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ

ಕುಹು ಕುಹು ಎಂದರೇನೆ ಜೀವನ

ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ

ಸವಿ ಪ್ರೇಮ ದೊರೆತ ಬಾಳು ಧನ್ಯವೋ ಹೇಹೇ

ಈ ನಾಡು ನುಡಿಯಿದು,

ನನಗೆ ಎಂದೂ ಕೋಟಿ ರುಪಾಯಿ

ಈ ಬಾಳ ಗುಡಿಯಲಿ,

ನಿಜದ ಮುಂದೆ ನಾನು ಸಿಪಾಯಿ

ಅಂದವೋ ಅಂದವು ಕನ್ನಡ ನಾಡು

ನನ್ನ ಗೂಡು ಅಲ್ಲಿದೆ ನೋಡು

ಚಂದವೋ ಚಂದವು ನನ್ನಯ ಗೂಡು

ನನ್ನ ಹಾಡು ಅಲ್ಲಿದೆ ನೋಡು

ಕಾವೇರಿ ಹರಿವಳು,ನನ್ನ ಮನೆಯ ಅಂಗಳದಲ್ಲಿ

ಕಸ್ತೂರಿ ಮೆರೆವಳು,ನನ್ನ ಮಡದಿ ಮಲ್ಲಿಗೆಯಲ್ಲಿ