menu-iconlogo
huatong
huatong
avatar

Madarangiyalli

Power praveenhuatong
🔥⃝⃪🦋❥POWER🌟praveen🦋༆huatong
بول
ریکارڈنگز
F:-ಮದರಂಗಿಯಲ್ಲಿ

ಮನಸಿನ ರಂಗು ಮೂಡಿದೆ

ಮದರಂಗಿಯಲ್ಲಿ ಮನಸಿನ

ರಂಗು ಮೂಡಿದೆ...

ಬಾಸಿಂಗದಲ್ಲಿ ಕನಸಿನ ಮುತ್ತು

ತೂಗಿದೆ....

ಬನ್ನಿ ಕುಣಿಯೋಣ ಎಲ್ಲ ಸೇರಿ

ನಲಿಯೋಣ ಶುಭ ಕೋರಿ

ಉಲ್ಲಾಸದಲ್ಲಿ ಈ ದಿನ.......

ಬಾಳ ದಾರೀಲಿ ಹೊಸ ಜೋಡಿ

ಹೊರಟಿದೆ ಜೊತೆಗೂಡಿ

ಎಲ್ಲೆಲ್ಲು ತಳಿರು ತೋರಣ.....

M:-ಮದರಂಗಿಯಲ್ಲಿ

ಮನಸಿನ ರಂಗು ಮೂಡಿದೆ...

ಬಾಸಿಂಗದಲ್ಲಿ ಕನಸಿನ ಮುತ್ತು

ತೂಗಿದೆ

ಬನ್ನಿ ಕುಣಿಯೋಣ ಎಲ್ಲ ಸೇರಿ

ನಲಿಯೋಣ ಶುಭ ಕೋರಿ

ಉಲ್ಲಾಸದಲ್ಲಿ ಈ ದಿನ.......

ಬಾಳ ದಾರೀಲಿ ಹೊಸ ಜೋಡಿ

ಹೊರಟಿದೆ ಜೊತೆಗೂಡಿ

ಎಲ್ಲೆಲ್ಲು ತಳಿರು ತೋರಣ.....

M&F:-ಮದರಂಗಿಯಲ್ಲಿ

ಮನಸಿನ ರಂಗು ಮೂಡಿದೆ...

ಬಾಸಿಂಗದಲ್ಲಿ ಕನಸಿನ ಮುತ್ತು

ತೂಗಿದೆ

........-:ರಿಕ್ವೆಸ್ಟ ಬಾಯ್:-.......

..........ಶಾಲಿನಿ ಗಾನವಿ.........

M:-ಆಟದ ಬಯಲಿನ ಆಟವ

ತೊರೆದು

ನೂತನ ಪುಟವನು

ತೆರೆಯುವ ಸಮಯ

F:- ಕಳಶದ ಕನ್ನಡಿ

ಹೊಳೆಯುತಲಿರಲು

ಮಮತೆಯ ಧಾರೆಯ

ಎರೆಯುವ ಸಮಯ

M:-ಹಿರಿಯರ ಹ್ರದಯವು

ಹನಿಯುವ ಸಮಯ

F:-ಹೊ..ಹರೆಯದ ಕಣ್ಗಳ

ಅರಳುವ ಸಮಯ

M:-ಕೈಯಲಿರಲು ಹೂಮಾಲೆ

ಕಣ್ಣಿನಲ್ಲಿ ಪ್ರಾಣ

ತೆರೆಯೊಂದು ಸರಿದಾಗ ಸಂಜೀವನ.....

F:-ಅಕ್ಷತೆಯು ಈಗ ನಾಚುತ

ಕೆಂಪಗಾಗಿದೆ

ಮದರಂಗಿಯಲ್ಲಿ

ಮನಸಿನ ರಂಗು ಮೂಡಿದೆ

M:-ಮಳೆಬಿಸಿಲಿರಲಿ

ಸಿಹಿ ಕಹಿ ಇರಲಿ

ಆಸರೆಯಾಗುವ

ವಚನದ ಸಮಯ

F:-ಮಂಗಳ ಸೂತ್ರದಿ

ಬಾಳಿನ ಪಟವು

ಬಾನಿಗೆ ಏರುವ ಪಯಣದ

ಸಮಯ

ನಲುಮೆಯ ದಿಬ್ಬಣ

ನಲಿಯುವ ಸಮಯ

M:-ಹೊ.. ನೆನಪಿನ ಬಾಗಿನ

ನೀಡುವ ಸಮಯ

ಅಗ್ನಿ ಸಾಕ್ಷಿಯಲ್ಲೀಗ

ಅಂತರಂಗ ಮಿಲನ

ಚೆಲುವಿನ ಔತಣದ ಸಮ್ಮಿಲನ..........

F:-ಪಲ್ಲಕ್ಕಿಯಿಂದು

ಹಾರುವ ಹಕ್ಕಿಯಾಗಿದೆ

ಮದರಂಗಿಯಲ್ಲಿ

ಮನಸಿನ ರಂಗು ಮೂಡಿದೆ

M:-ಬನ್ನಿ ಕುಣಿಯೋಣ ಎಲ್ಲ

ಸೇರಿ ನಲಿಯೋಣ ಶುಭ ಕೋರಿ

ಉಲ್ಲಾಸದಲ್ಲಿ ಈ ದಿನ.......

F:-ಬಾಳ ದಾರೀಲಿ ಹೊಸ ಜೋಡಿ

ಹೊರಟಿದೆ ಜೊತೆಗೂಡಿ

ಎಲ್ಲೆಲ್ಲು ತಳಿರು ತೋರಣ.....

F:- ಬಲಗಾಲನಿಟ್ಟು

ಬಾಳಿಂದು ಒಳಗೆ ಬಂದಿದೆ

ಮನದಂಗಳದಲ್ಲಿ ಪ್ರೀತಿಯ

ದೀಪ ಬೆಳಗಿದೆ

Power praveen کے مزید گانے

تمام دیکھیںlogo