ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ
(ಯಾವ ಮೋಹನ ಮುರಳಿ ಕರೆಯಿತು)
(ದೂರ ತೀರಕೆ ನಿನ್ನನು)
(ಯಾವ ಬೃಂದಾವನವು ಸೆಳೆಯಿತು)
(ನಿನ್ನ ಮಣ್ಣಿನ ಕಣ್ಣನು)
(ವಿವಶವಾಯಿತು ಪ್ರಾಣ ಹಾ)
(ವಿವಶವಾಯಿತು ಪ್ರಾಣ ಹ)
(ಪರವಶವು ನಿನ್ನೀ ಚೇತನ)
ವಿವಶವಾಯಿತು ಪ್ರಾಣ ಹ
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು