menu-iconlogo
logo

Inthi Ninna Preetiya

logo
بول
ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ

ಎನುತ ಕಣ್ಣಲ್ಲೆ ಬರಿತಾಳೆ ಓಲೆಯ

ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾ ಆತ್ಮೀಯ

ನಗುತಾ ಸನ್ನೇಲೆ ಕರೀತಾನೆ ಮಾರಾಯ

ಮನಸಿನ ಮನೆಯವನು ಕಾಗದ ಬರೆಯುವನು

ಕುಶಲವೇ ನೀನು ಕ್ಷೇಮವೇ ನೀನು

ಅಂತ ಬರೆದನು...

ಅತೀ ಅತಿ ಸಿಹಿ ಶುಭಾಶಯ

ಪ್ರೀತಿ ಪ್ರತಿ ಪದ ಶುಭಾಶಯ.

ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ

ಎನುತ ಕಣ್ಣಲ್ಲೆ ಬರಿತಾಳೆ ಓಲೆಯ.

ಜೊತೆಯಾಗಿ ಬಹು ದೂರ ಹೋಗೊಣ

ಪ್ರಯಾಣ ಎಲ್ಲೆಂದು ನಾ ಹೇಳಲಾ

ತುಸು ದೂರ ನಸು ನಕ್ಕು ಸಾಗೋಣ

ಪ್ರೀತೀನಾ ಪತ್ತೆ ಮಾಡೊ ಹಂಬಲ

ಇವನ್ಯಾರೊ ಬೈರಾಗಿ

ಬಂದಾನೊ ನನಗಾಗಿ

ಬಿಡಿಗಾಸು ಬದಲಾಗಿ ನನ ಮೇಲೆ ಮನಸಾಗಿ

ತನ್ನ ಜೋಳಿಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ

ಅತೀ ಅತೀ ಸಿಹಿ ಸುಳ್ಳುಗಳು

ಇದೇ ನಿಜ ಅನ್ನೊ ಪ್ರೇಮಿಗಳು.

ಓ ಓ ತುಂಬಾ ತುಂಬಾ ಆತ್ಮೀಯ

ನಂಗೆ ತುಂಬಾ ಆತ್ಮೀಯ

ನಗುತಾ ಸನ್ನೇಲೆ ಕರೀತಾನೆ ಮಾರಾಯ

ತುಂಬಾನೆ ಹುಶಾರಾಗೆ ಇದ್ದೆನು

ಹಾಗಿದ್ದು ನಾ ಪ್ರೀತೀಲಿ ಬಿದ್ದೆನು

ಕಣ್ಣೋಟ ಕಲ್ಯಾಣ ಆಗೆಂದಿತು

ಮಾತೇಕೊ ಇನ್ನು ಕಾಲ ಕೇಳೀತು

ಮನಸೇಳೊ ವಿಷಯಾನ

ಮರೆಯೋದು ಸರಿಯೇನಾ

ಕೊಡು ಬಾರೆ ಹೃದಯನಾ ಬಿಡು ನಿನ್ನ ಬಿಗುಮಾನ

ನನ್ನ ನಲ್ಮೆಯ ನಲ್ಲೆ ನಮ್ಮಯ ಪ್ರೀತಿ ವಿಸ್ಮಯ

ಅತೀ ಅತೀ ಸಿಹಿ ಕವಿತೆಗಳು

ಇದೇ ನಿಜ ಅನ್ನೊ ಪ್ರೇಮಿಗಳು

ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ

ಎನುತ ಕಣ್ಣಲ್ಲೆ ಬರಿತಾಳೆ ಓಲೆಯ

ತುಂಬಾ ತುಂಬಾ ಆತ್ಮೀಯ ನಂಗೆ ತುಂಬಾಆತ್ಮೀಯ

ನಗುತಾ ಸನ್ನೇಲೆ ಕರೀತಾನೆ ಮಾರಾಯ

ಮನಸಿನ ಮನೆಯವನು ಕಾಗದ ಬರೆಯುವನು

ಕುಶಲವೇ ನೀನು ಕ್ಷೇಮವೇ ನೀನು ಅಂತ ಬರೆದನು

ಅತೀ ಅತಿ ಸಿಹಿ ಶುಭಾಶಯ

ಪ್ರೀತಿ ಪ್ರತಿ ಪದ ಶುಭಾಶಯ.

Inthi Ninna Preetiya بذریعہ Sonu Nigam/Nanditha - بول اور کور