menu-iconlogo
huatong
huatong
بول
ریکارڈنگز
ಕುಶಲವೇ ಕ್ಷೇಮವೇ ಸೌಖ್ಯವೇ

ಓ ನನ್ನಾ ಪ್ರೀತಿಪಾತ್ರಳೇ

ಓದಮ್ಮಾ ನನ್ನ ಓಲೇ

ಹೃದಯ ಭಾವಲೀಲೇ

ಕಲ್ಪನೆಯೇ ಹೆಣ್ಣಾಗಿದೇ

ಕನಸುಗಳೇ ಹಾಡಾಗಿದೇ

ಯಾರೇ ನೀನು ಚೆಲುವೇ ಅಂದಿದೇ

ಕುಶಲವೇ ಕ್ಷೇಮವೇ ಸೌಖ್ಯವೇ

ನಾ ನಿನ್ನಾ ಓಲೆ ಓದಿದೆ

ತೆರೆದ ಹೃದಯವದೂ

ಪ್ರೇಮರೂಪವದೂ

ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ

ಓ..ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..

ಮುದ್ದಾದ

ಬರಹ

ಮರೆಸಿದೆ

ವಿರಹ

ಅಕ್ಷರಕ್ಕೆ ಯಾರೋ

ಈ ಮಾಯಾಶಕ್ತಿ ತಂದಾರೋ

ಒಂದೊಂದೂ

ಪತ್ರವೂ

ಪ್ರೇಮದಾ

ಗ್ರಂಥವೋ

ಓಲೆಗಳಿಗ್ಯಾರು

ಈ ರಾಯಭಾರ ತಂದಾರೋ

ಓಲೆಗಳೇ ಬಾಳಾಗಿದೇ,

ಓದುವುದೇ ಗೀಳಾಗಿದೇ

ಹೇ..ಯಾರೋ ನೀನು ಚೆಲುವಾ ಅಂದಿದೇ

ಕುಶಲವೇ ಕ್ಷೇಮವೇ ಸೌಖ್ಯವೇ

ಈ ಮಾತೇ ಮಧುರವಾಗಿದೆ

ತೆರೆದ ಹೃದಯವದೂ

ಪ್ರೇಮರೂಪವದೂ

ನೂರಾರು ಪ್ರೇಮದಾಸರೂ

ಪ್ರೀತಿಸಿ ದೂರವಾದರೂ

ನಾವಿಂದು ದೂರ ಇದ್ದರೂ

ವಿರಹಗಳೆ ನಮ್ಮ ಮಿತ್ರರೂ

ನೋಡದೇ

ಇದ್ದರೂ

ಪ್ರೀತಿಸೋ

ಇಬ್ಬರೂ

ನೋಡೋರ ಕಣ್ಣಲ್ಲೀ

ಏನೇನೋ ಹಾಡೋ ಹುಚ್ಚರು

ದೂರಾನೇ

ಆರಂಭ,

ಸೇರೋದೇ

ಅಂತಿಮ

ಅಲ್ಲಿವರೆಗೂ ಯಾರೂ

ಈ ಹುಚ್ಚು ಪ್ರೀತಿ ಮೆಚ್ಚರು

ದೂರದಲೇ ಹಾಯಾಗಿದೇ..

ಕಾಯುವುದೇ. ಸುಖವಾಗಿದೇ

ಆ..ಯಾರೇ ನೀನೂ ಚೆಲುವೇ ಅಂದಿದೇ..

ಕುಶಲವೇ

ಆ ಕ್ಷೇಮವೇ..

ಸೌಖ್ಯವೇ

ನಾ ನಿನ್ನಾ ಓಲೆ ಓದಿದೇ

ತೆರೆದ ಹೃದಯವದೂ

ಪ್ರೇಮ ರೂಪವದೂ..

srinivaas/Anuradha Sriram کے مزید گانے

تمام دیکھیںlogo