S1: ಅಲ್ಲೊಂದು ಲೋಕವುಂಟು
ಇಲ್ಲೊಂದು ದಾರಿಯುಂಟು
ಅಲ್ಲೊಂದು ಲೋಕವುಂಟು
ಇಲ್ಲೊಂದು ದಾರಿಯುಂಟು
ಒಂದಾಗಿ ನಾವು ಹೋದರೇ...ಏ.
ನಮಗೆ..ಎಂದೆಂದು ಆನಂದವೇ.
ನಮಗೆ..ಎಂದೆಂದೂ ಆನಂದವೇ.
S2: ಬಡತನದ ಮಾತೇ ಇಲ್ಲ
ಹಸಿವೆಂಬುದು ಅಲ್ಲಿ ಇಲ್ಲಾ
ಬಡತನದ ಮಾತೇ ಇಲ್ಲ
ಹಸಿವೆಂಬುದು ಅಲ್ಲಿ ಇಲ್ಲಾ
ಅಲ್ಲಿರಲು ನಮಗೆ ಎಂದೆಂದೂ.ಉ.
ತಮ್ಮಾ..ಕಣ್ಣೀರು ಚಿಂತೇ ಇಲ್ಲಾ..
ತಮ್ಮಾ..ಕಣ್ಣೀರು ಚಿಂತೇ ಇಲ್ಲಾ..
ಅಲ್ಲೊಂದು ಲೋಕ ಉಂಟು
ಇಲ್ಲೊಂದು ದಾರಿಯುಂಟು
ಒಂದಾಗಿ ನಾವು ಹೋದರೇ..ಏ.
ನಮಗೆ..ಎಂದೆಂದೂ ಆನಂದವೇ.
ನಮಗೆ..ಎಂದೆಂದೂ ಆನಂದವೇ.
S1: ಇಲ್ಲಾರು ಬಂಧುಗಳಿಲ್ಲ
ನೆರಳನ್ನು ನೀಡುವರಿಲ್ಲಾ..ಅ
ಇಲ್ಲಾರು ಬಂಧುಗಳಿಲ್ಲ
ನೆರಳನ್ನು ನೀಡುವರಿಲ್ಲ
ಇಲ್ಲಿರಲು ನಮಗೇ ಎಂದೆಂದೂ.
ತಂಗಿ..ಈ ನೋವು ಮುಗಿಯೋದಿಲ್ಲ
ತಂಗಿ..ಈ ನೋವು ಮುಗಿಯೋದಿಲ್ಲ
S2: ಅಲ್ಲೊಂದು ಲೋಕ ಉಂಟು
ಇಲ್ಲೊಂದು ದಾರಿಯುಂಟು
ಒಂದಾಗಿ ನಾವು ಹೋದರೇ...ಏ.
ನಮಗೆ..ಎಂದೆಂದೂ ಆನಂದವೇ.
ನಮಗೆ..ಎಂದೆಂದೂ ಆನಂದವೇ..
S2: ಕೈ ಚಾಚಿ ನಮ್ಮನ್ನೆಲ್ಲ
ನಮ್ಮಮ್ಮ ಕೂಗಿಹಳಲ್ಲಾ
S1: ಕೈ ಚಾಚಿ ನಮ್ಮನ್ನೆಲ್ಲ
ನಮ್ಮಮ್ಮ ಕೂಗಿಹಳಲ್ಲಾ
ಆ ತಾಯ ಮಡಿಲ ಸೇರಿ
Both: ಈಗಾ..ಬನ್ನಿ ಹೋಗೋಣಾ ಎಲ್ಲಾ
ಈಗಾ..ಬನ್ನಿ ಹೋಗೋ..ಣಾ ಎಲ್ಲಾ..ಹ್ ಹ