menu-iconlogo
logo

Ibbani Thabbida

logo
Lời Bài Hát
ಹೂಂ ...ಹ್ಮ್ಮ್... ಹೂಂ

ಇಬ್ಬನಿ ತಬ್ಬಿದ ಇಳೆಯಲಿ

ರವಿ ತೇಜ ಕಣ್ಣ ತೆರೆದು ..

ಇಬ್ಬನಿ ತಬ್ಬಿದ ಇಳೆಯಲಿ

ರವಿ ತೇಜ ಕಣ್ಣ ತೆರೆದು

ಬಾನಾ ಕೋಟಿ ಕಿರಣ ಇಳಿದು ಬಂತು ಭೂ..ಮಿಗೆ ...

ಇಬ್ಬನಿ ತಬ್ಬಿದ ಇಳೆಯಲಿ

ರವಿ ತೇಜ ಕಣ್ಣ ತೆರೆದು ..

ಬಾನಾ ಕೋಟಿ ಕಿರಣ ಇಳಿದು ಬಂತು ಭೂ..ಮಿಗೆ ...

ಹಾಡು ಹಕ್ಕಿಕೂಗಿ ಇಂಪಾದ ಗಾನವು

ಗಾಳಿ ಬೀಸಿ ಬೀಸಿ ಮಧು ಮಧುರ ತಾಣವು

ಬೆಳಕ್ಕಿ ಕೂಗಿ ಪಲ್ಲಕ್ಕಿ.

ಕಣ್ಣಲ್ಲಿ ಭಾವ ಉಕ್ಕುಕ್ಕಿ

ಮೊಲ್ಲೆ ಮರದ ಜಾಜಿ ಸೊಗಸಾಗಿ

ಅರಳಿ ಕಾನನದ ಕಾವ್ಯ..

ಇಬ್ಬನಿ ತಬ್ಬಿದ ಇಳೆಯಲಿ

ರವಿ ತೇಜ ಕಣ್ಣ ತೆರೆದು ..

ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...

ದೂರ ನಿಂತ ಬೆಟ್ಟ ಗಂಭೀರ ಮೌನವು..

ಟೊಂಗೆ ಟೊಂಗೆ ಸೇರಿ ಹಸಿ ಹಸಿರ ಲಾಸ್ಯವು

ಅತ್ತಿತ್ತ ಧಾರೆ ಚೆಲ್ಲುತ್ತ..

ಧುಮ್ಮಿಕ್ಕಿ ನದಿಯು ಓಡುತ್ತ

ಹಾವು ಹರಿದ ರೀತಿ..ಚೆಲುವಾಗಿ

ಹರಿವ ಕಾವೇರಿಯ ನಾಟ್ಯ

ಇಬ್ಬನಿ ತಬ್ಬಿದ ಇಳೆಯಲಿ

ರವಿ ತೇಜ ಕಣ್ಣ ತೆರೆದು ..

ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ

ಹೂಂ ಹೂ ಹೂ ಹೂಂ ಹೂಂ ಹೂ ಹೂ

Ibbani Thabbida của B. R. Chaya - Lời bài hát & Các bản Cover