menu-iconlogo
logo

Yaare Nee Devatheya (From "Ambari")

logo
Lời Bài Hát
ಯಾರೆ ನೀ ದೇವತೆಯಾ?

ನನಗೆ ನೀ ಸ್ನೇಹಿತೆಯಾ?

ಏನಾಗಬೇಕೋ ಕಾಣೆ ಹೇಗೆ ತಿಳಿಯಲಿ ನಾ

ಪ್ರೀತಿಸಿ ಹೊರಟವಳೇ

ಯಾರನು ಕೂಗಲಿ ನಾ

ನೀ ನನ್ನ ಪ್ರಾಣ ಅಂತ ಯಾರಿಗೆ ಹೇಳಲಿ ನಾ

ಕಳೆದ್ಹೋದೆ ನಾನು ಕಳೆದ್ಹೋದೆ

ನಾ ನಿಂತಲ್ಲೇ ಪೂರ್ತಿ ಹಾಳಾದೆ

ಯಾರೆ ನೀ ದೇವತೆಯಾ?

ನನಗೆ ನೀ ಸ್ನೇಹಿತೆಯಾ?

ಏನಾಗಬೇಕೋ ಕಾಣೆ ಹೇಗೆ ತಿಳಿಯಲಿ ನಾ

ಹಾಡೋ ಕೋಗಿಲೆಗೊಂದು ಕೂಗೋ ಕಾಗೆಯ ಗೂಡು

ನಂಗೆ ಯಾವ ಗೂಡು ಇಲ್ಲ ಪ್ರೀತಿಯ ಸಾಕೋಕೆ

ಪ್ರೀತಿ ಬೀದಿಯಲ್ಲಿ ನಿಂದೆ ಪ್ರೀತಿಯ ಹಾಡು

ನಿನ್ನ ಬಿಟ್ಟು ನಂಗ್ಯಾರಿಲ್ಲ ಹೃದಯಾನ ನೀಡೋಕೆ

ಹೃದಯ ಮಳಿಗೆ ಇದು ನಿಂದೇನೆ

ಘಳಿಗೆ ಕೆಳಗೆ ಹೊರಬಂದೇನೆ

ಮಾತಿದ್ದರೂ ಹೇಳದೆ ನಿನ್ನಲಿ

ಮೂಕಾದೆ ನಾನು ಮೂಕಾದೆ

ಪ್ರೀತಿ ತಿಳಿಸೋಕೆ ಮುಂಚೆ ಮೂಕಾದೆ

ಯಾರೆ ನೀ ದೇವತೆಯಾ?

ನನಗೆ ನೀ ಸ್ನೇಹಿತೆಯಾ?

ಏನಾಗಬೇಕೋ ಕಾಣೆ ಹೇಗೆ ತಿಳಿಯಲಿ ನಾ

ಸಾಯೋ ರಾತ್ರಿಗೆ ಮುನ್ನ ಬೀಳೋ ಸ್ವಪ್ನದ ಹಾಗೆ

ಕಣ್ಣ ಮುಂದೆ ನೀ ಬಂದಾಗಲೇ ಕಣ್ಣೀರು ಸತ್ತಿದ್ದು

ಮೇಲು ಆಗಸದಲ್ಲೂ ಕಾಲು ದಾರಿಯ ಮಾಡೋ

ನಿನ್ನ ಹೆಜ್ಜೆ ನಾ ಕಂಡಾಗಲೇ ಸೋಲನ್ನು ನೋಡಿದ್ದು

ಎದೆಯ ಬಡಿತ ಇದು ನಿಂದೇನೆ

ಕೊನೆಯ ಬಡಿತ ನಿನ್ಹೆಸರೇನೆ

ಹೆಗ್ಹೇಳಲಿ ಹುಚ್ಚು ಈ ಪ್ರೀತಿಯಾ

ಏನಾದೆ ನಾನು ಏನಾದೆ

ಎಲ್ಲ ತಿಳಿಸೋಕೆ ಮುಂಚೆ ಹೀಗಾದೆ

ಯಾರೆ ನೀ ದೇವತೆಯಾ?

ನನಗೆ ನೀ ಸ್ನೇಹಿತೆಯಾ?

ಏನಾಗಬೇಕೋ ಕಾಣೆ ಹೇಗೆ ತಿಳಿಯಲಿ ನಾ

Yaare Nee Devatheya (From "Ambari") của Chetan Sosca - Lời bài hát & Các bản Cover