menu-iconlogo
logo

Januma Needuthale

logo
Lời Bài Hát
ಚಿತ್ರ : ಬೇವು ಬೆಲ್ಲ

ಗಾಯನ: ರಾಜೇಶ್ ಕೃಷ್ಣನ್

ಜನುಮ ನೀಡುತ್ತಾಳೆ ನಮ್ಮ ತಾಯಿ..

ಅನ್ನ ನೀಡುತ್ತಾಳೆ ಭೂಮಿ ತಾಯಿ..

ಮಾತು ನೀಡುತ್ತಾಳೆ ಕನ್ನಡ ತಾ ಯಿ...

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಜನುಮ ನೀಡುತ್ತಾಳೆ ನಮ್ಮ ತಾಯಿ

ಅನ್ನ ನೀಡುತ್ತಾಳೆ ಭೂಮಿ ತಾಯಿ

ಮಾತು ನೀಡುತ್ತಾಳೆ ಕನ್ನಡ ತಾಯಿ...

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ ಕಾವೇರಿ... ತಾಯಿ

ಓದಿದರೂ..... ಗೀಚಿದರೂ......

ಓಲೆಯ ಊದಬೇಕು...

ತಾಯಿ ಆಗಬೇಕು...

ತಾಯಿ ನೆಲದ ಋಣ ತೀರಿಸಲೇಬೇಕು

ತಾಯಿ ಬಾಷೆ ನಿನ್ನ ಮಕ್ಕಳು ಕಲಿಬೇಕು..

ಕಾವೇರಿ.. ನೀರಲ್ಲಿ.. ಬೆಳೆ ಬೇಯಿಸಬೇಕು

ಜನುಮ ನೀಡುತ್ತಾಳೆ ನಮ್ಮ ತಾಯಿ

ಅನ್ನ ನೀಡುತ್ತಾಳೆ ಭೂಮಿ ತಾಯಿ

ಮಾತು ನೀಡುತ್ತಾಳೆ ಕನ್ನಡ ತಾಯಿ..

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಜಾರಿದರೂ... ಯಡವಿದರೂ...

ಕೈ ಹಿಡಿಯುತ್ತಾಳೆ...

ತಾಯಿ ಕಾಯುತ್ತಾಳೆ..

ಭೂಮಿ ತಾಯಿ ನೀ ಸತ್ತರೂ ಕರಿತಾಳೆ

ತಾಯಿ ಬಾಷೆ ನೀ ಹೋದರು ಇರುತಾಳೆ

ಸಾವಲ್ಲಿ... ಕಾವೇರಿ... ಬಾಯಿಗೆ ಸಿಗುತಾಳೆ

ಜನುಮ ನೀಡುತ್ತಾಳೆ ನಮ್ಮ ತಾಯಿ

ಅನ್ನ ನೀಡುತ್ತಾಳೆ ಭೂಮಿ ತಾಯಿ

ಮಾತು ನೀಡುತ್ತಾಳೆ ಕನ್ನಡ ತಾಯಿ...

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ ಕಾವೇರಿ... ತಾಯಿ

Januma Needuthale của Rajesh Krishnan - Lời bài hát & Các bản Cover