ಗ ಹೆ:ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಗ:ಕರುನಾಡು ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪಾ ಆ ..
ಗ ಹೆ:ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಗ:ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಳೆಯಾ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು
ಸೂಸಲು ಅಲ್ಲಲ್ಲಿ ಕರಣಾ ಚಾಚೇವು
ಹೆ:ಬಹುದಿನಗಳಿಂದ ಮೈಮರವೆಯಿಂದ
ಕೂಡಿರುವ ಕೊಳೆಯಾ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು
ಸೂಸಲು ಅಲ್ಲಲ್ಲಿ ಕರಣಾ ಚಾಚೇವು
ಗ:ನಡುನಾಡೆ ಇರಲಿ ಗಡಿನಾಡೆ
ಇರಲಿ ಕನ್ನಡದ ಕಳೆಯಾ ಕೆಚ್ಚೇವು
ಹೆ:ನಡುನಾಡೆ ಇರಲಿ ಗಡಿನಾಡೆ
ಇರಲಿ ಕನ್ನಡದ ಕಳೆಯಾ ಕೆಚ್ಚೇವು
ಗ:ಮರೆತೆವು ಮರವ ತೆರೆದೇವು ಮನವ
ಎರೆದೇವು ಒಲವಾ ಹಿಡಿನೆನಪಾ
ನರನರವನೆಲ್ಲಾ ಹುರಿಗೊಳಿಸಿ
ಹೊಸೆದು ಹಚ್ಚೇವು ಕನ್ನಡದ ದೀಪ
ಗ ಹೆ:ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹೆ:ಕಲ್ಪನೆಯ ಕಣ್ಣು ಹರಿವನಕ
ಸಾಲು ದೀಪಗಳ ಬೆಳಕಾ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೆವು
ಗ:ಕಲ್ಪನೆಯ ಕಣ್ಣು ಹರಿವನಕ
ಸಾಲು ದೀಪಗಳ ಬೆಳಕಾ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೆವು
ಹೆ:ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿ ನಾಚೆ ತೂರೆವು
ಗ:ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿ ನಾಚೆ ತೂರೆವು
ಹೆ:ಹೊಮ್ಮಿರಲು ಪ್ರೀತಿ ಎಲ್ಲಿಯದು
ಭೀತಿ ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ
ಹಚ್ಚೇವು ಕನ್ನಡದ ದೀಪ
ಗ ಹೆ:ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಗ:ನಮ್ಮವರುಗಳಿಸಿದ ಹೆಸರುಳಿಸಲು
ಎಲ್ಲಾರು ಒಂದೂ ಗೂಡೆವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೆವು
ಹೆ:ನಮ್ಮವರುಗಳಿಸಿದ ಹೆಸರುಳಿಸಲು
ಎಲ್ಲಾರು ಒಂದೂ ಗೂಡೆವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೆವು
ಗ:ನಮ್ಮುಸಿರು ತೀಡುವಿ ನಾಡಿನಲ್ಲಿ
ಮಾಂಗಲ್ಯ ಗೀತಾ ಹಾಡೇವು
ಹೆ:ನಮ್ಮುಸಿರು ತೀಡುವಿ ನಾಡಿನಲ್ಲಿ
ಮಾಂಗಲ್ಯ ಗೀತಾ ಹಾಡೇವು
ಗ:ತೊರೆದೆವು ಮರುಳ ಕಡೆದೇವು ಇರುಳ
ಪಡೆದೆವು ತಿರುಳ ಹಿಡಿನೆನಪಾ
ಕರುಳೆಂಬ ಕುಡಿಗೆ ಮಿನ್ಚನ್ನೆ
ಮುಡಿಸಿ ಹಚ್ಚೇವು ಕನ್ನಡದ ದೀಪ
ಗ ಹೆ:ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ