Part 1 Male
Part 2 Female
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನಾ ನಿನ್ನ ಕಣ್ಣಾಗಿ
ನೀನಾಡೊ ನುಡಿಯಾಗಿ
ಗಿಡವಾಗಿ, ಮರವಾಗಿ
ನೆರಳಾಗಿ , ಜೊತೆಯಾಗಿ
ನಾನಿರುವೆ.. ಏಏಏ..
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನಾ ನಿನ್ನ ಕಣ್ಣಾಗಿ
ನೀನಾಡೊ ನುಡಿಯಾಗಿ
ಗಿಡವಾಗಿ, ಮರವಾಗಿ
ನೆರಳಾಗಿ , ಜೊತೆಯಾಗಿ
ನಾನಿರುವೆ.. ಏಏಏ..
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನ..ಲ್ಲೆ
ಗಾಯಕರು : ಡಾ. ರಾಜ್ ಕುಮಾರ್
ಮತ್ತು ಎಸ್. ಜಾನಕಿ
ಸಂಗೀತ : ರಾಜನ್ ನಾಗೇಂದ್ರ
ಸಾಹಿತ್ಯ : ಚಿ. ಉದಯಶಂಕರ್
ಬಳಿಯಲೇ ಬಂಗಾರ ಇರುವಾಗ
ಅದನು ನೋಡದೆ...
ಅಲೆಯುತ ದಿನ ಬಳಲಿದೆ
ಕಣ್ಣೀಗ ತೆರೆಯಿತು...
ಬಯಸಿದ ಸೌಭಾಗ್ಯ ಕೈಸೇರಿ
ಹರುಷ ಮೂಡಿತು..
ಒಲವಿನ ಲತೆ ಚಿಗುರಿತು
ಕನಸಿನ್ನು ಮುಗಿಯಿತು..
ಇನ್ನೆಂದು ನಿನ್ನನ್ನು
ಚೆಲುವೆ ಬಿಡಲಾರೆ ನಾ
ಓ ಓ ಓ ಓ ಬಾಗಿಲಿಗೆ ಹೊಸಿಲಾಗಿ
ತೋರಣದ ಹಸಿರಾಗಿ
ಪೂಜಿಸುವ ಹೂವಾಗಿ
ಇಂಪಾದ ಹಾಡಾಗಿ
ಮನಸಾಗಿ, ಕನಸಾಗಿ,
ಬಾಳೆಲ್ಲ ಬೆಳಕಾಗಿ
ನಾ ಬರುವೇ..ಏಏಏ..
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನ..ಲ್ಲೆ
ಬದುಕಿನ ಹಾಡಲ್ಲಿ ಜೊತೆಯಾಗಿ
ಶೃತಿಯ ಬೆರೆಸುವೆ..
ರಾಗದಿ ಹೊಸ ರಾಗದಿ
ಇಂಪನ್ನು ತುಂಬುವೆ.
ಹೃದಯದ ಗುಡಿಯಲ್ಲಿ ಓ ನಲ್ಲೆ
ನಿನ್ನ ಇರಿಸುವೆ
ಪ್ರೀತಿಯ ಸುಮದಿಂದಲೀ
ಸಿಂಗಾರ ಮಾಡುವೆ
ಆನಂದ ಹೆಚ್ಚಾಗಿ
ಕಣ್ಣೀರು ತುಂಬಿದೆ
ಓ ಓ ಓ ಓ ನಿನ್ನೊಡಲ ಉಸಿರಾಗಿ
ನಿನ್ನಾಸೆ ಕಡಲಾಗಿ
ಚೆಂದುಟಿಯ ನಗೆಯಾಗಿ
ಒಲವೆಂಬ ಸಿರಿಯಾಗಿ
ಜೇನಾಗಿ , ಸವಿಯಾಗಿ,
ಸಂತೋಷ ನಿನಗಾಗಿ
ನಾ ತರುವೇ.. ಏಏಏ..
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನಲ್ಲೆ
ನೀನೆಲ್ಲೋ ನಾನಲ್ಲೆ
ಈ ಜೀವ ನಿನ್ನ..ಲ್ಲೆ