>>>KANNADADA<<<
>>>KOGILEGALU<<<
(((( 118477 ))))
ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ,
ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ,
ಮರಿಲಾರೆವು ನಿನ್ನನ್ನ...
ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ...
ಅಹ್ಹ..ಆಹ್ಹಾ.. ...
+++ಕೋರಸ್ ++
llıllı MAHI ıllıll
ಅಣ್ಣ ತಮ್ಮ ಯಾರು ಇಲ್ಲ
ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ
ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ
ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ
ಜೀವ ಕೊಡುವೆ ಇಲ್ಲ ಶಂಕೆ
ಬಂಗಾರದ ಮನುಷ್ಯನ
ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು
ಶಿವ ಮೆಚ್ಚಿದ ಕಣ್ಣಪ್ಪ
ಮಣ್ಣಿನ ಮಗ ಜಗ ಮೆಚ್ಚಿದ
ಹುಡುಗ ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ
ಪರಶುರಾಮನಂತೆ
ಮೃತ್ಯುಂಜಯ ನಾನೇ
+++ಕೋರಸ್ ++
ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿಯ ಮುತ್ತಣ್ಣ...
llıllı MAHI ıllıll
ಜಾತಿ ಮತವು ಬೇರೆ ಆದ್ರೂ
ತಾಯಿ ಹಾಲು ಒಂದೇ ರುಚಿಯು
ನಾವು ನೀವು ಯಾರೇ ಆದ್ರೂ
ನಮ್ಮ ತಾಯೇ ಭುವನೇಶ್ವರಿಯು
ಕೋಟಿ ಕೋಟಿ ಹಣವೇ ಇರಲಿ
ತಿನ್ನುವುದು ಎರಡೇ ಹೊತ್ತು
ಅರಮನೆಯೇ ನಮಗಾಗಿರಲಿ
ಕೊನೆಗೆ ಇಹುದು ಆರಡಿ ಸೊತ್ತು
ದೇವತಾ ಮನುಷ್ಯನಾಗಿ
ವೀರಕೇಸರಿ ಆಗು
ಭಾಗ್ಯದ ಬಾಗಿಲು ತೆರೆದು
ಧೃವತಾರೆ ಆಗು
ಏನು ಪುಣ್ಯ ಮಾಡಿ ಯಾವ ಪೂಜೆ
ಮಾಡಿ ಇಲ್ಲಿ ನಾನು ಹುಟ್ಟಿರುವೆ
ನಿಮ್ಮ ಅಭಿಮಾನ ಸದಾ ನನ್ನ
ಪ್ರಾಣ ದೊಡ್ಡರ ದಾರೀಲಿ ನಡೆವೆ
+++ಕೋರಸ್ ++
ಕನ್ನಡದ ಕುವರನು ನಾನೇ
ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ
ನಿಮ್ಮ ಪ್ರೀತಿಯ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ,
ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ,
ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ
ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ...
ಅಹ್ಹ..ಆಹ್ಹಾ.. ...
+++ಕೋರಸ್ ++