ಸನಿಹ ಬಂದ ಮೇಲೆ ಸಂಕೋಚ ಏತಕೆ
ಹೃದಯ ಕದ್ದ ಮೇಲೆ ಹುಡುಕಾಟ ಏತಕೆ
ನಾ ಬರುವ ಹಾದಿಯಲಿ ನಗು ನಗುತಾ ನಿ ನಿಂತಿರಲು
ನನ್ನ ಮನದ ಮಹಡಿಯಲಿ
ನನ್ನೇ ಮರೆತೆ ನಿನ್ನ ಗುಂಗಿನಲಿ
ಸನಿಹ ಬಂದ ಮೇಲೆ ಸಂಕೋಚ ಏತಕೆ
ಹೃದಯ ಕದ್ದ ಮೇಲೆ ಹುಡುಕಾಟ ಏತಕೆ
ಮನದ ಕದವ ತೆರೆದಾಯ್ತು ಇನ್ನು ಒಳಗೆ ಬರಬಾರದೇ
ಆ ಸಂಜೆ ಸೂರ್ಯ ಸರಿದಾಯ್ತು ಇನ್ನು
ನೀನೊಮ್ಮೆ ನಗಬಾರದೇ
ಈಗೀಗ ನನಗೆ ಕನಸು ಕಾಣೋ ಕಣ್ಣು ಬಂದಾಗಿದೆ
ನೂರು ಮಾತು ಮೌನವಾಗಿ ಮೌನ ಮಾತಾಗಿದೆ
ಮಾತು ಮರೆವ ಮುನ್ನ ಮನದಾಸೆ ಹೇಳುವೆ
ತುಂಬಾ ಕಡದಂತೆ ನಾ ಮನವಿ ಮಾಡುವೆ
ಸನಿಹ ಬಂದ ಮೇಲೆ ಸಂಕೋಚ ಏತಕೆ
ಹೃದಯ ಕದ್ದ ಮೇಲೆ ಹುಡುಕಾಟ ಏತಕೆ
ನಿನ್ನ ನೋಡಿದ ಆ ಮೊದಲ ಕ್ಷಣವೇ ಮಧುರ ಮೈಕಂಪನ
ಏನು ಸೆಳೆತ ಏನೇನೋ ಸೆಳೆತ ಎಂತ ರೋಮಾಂಚನ
ನೂರಾರು ಬಾರಿ ಸಾಲ ಪಡೆದೆ ನಿನ್ನ ಸಿಹಿ ಮುತ್ತನು
ತೀರಿಸುವೆನು ಮರೆಯದೇನೆ ಸಾವಿರ ಪಟ್ಟನು
ನಿನ್ನ ತುಟಿಯ ಮೇಲೆ ನನ್ನ ಹೆಸರ ಬರೆಯಲೇ
ಮತ್ತೆ ಮತ್ತದೆಕೋ ಮುತ್ತಾದೆ ಮುತ್ತಲೇ
ಸನಿಹ ಬಂದ ಮೇಲೆ
ಸಂಕೋಚ ಏತಕೆ
ಹೃದಯ ಕದ್ದ ಮೇಲೆ
ಹುಡುಕಾಟ ಏತಕೆ