menu-iconlogo
huatong
huatong
spbsreya-jayadeep-rekkeya-kudure-eri-cover-image

Rekkeya Kudure Eri

Spb/Sreya Jayadeephuatong
perfectthghuatong
Lời Bài Hát
Bản Ghi
(M)ರೆಕ್ಕೆಯ ಕುದುರೆ ಏರಿ

ಬೆಳ್ಳಿ ಬೆಳ್ಳಿ ಮೋಡವ ದಾಟಿ

ಬರುವ ನಿನ್ನ ಅಪ್ಪಯ್ಯ!

ಮೀನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ

ತರುವ ನಿನ್ನ ಅಪ್ಪಯ್ಯ

(F)-ರೆಕ್ಕೆಯ ಕುದುರೆ ಏರಿ

ಬೆಳ್ಳಿ ಬೆಳ್ಳಿ ಮೋಡವ ದಾಟಿ

ಬರುವ ನನ್ನ ಅಪ್ಪಯ್ಯ

ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ

ನಡೆಯುವೆನು ಅವನ ಜೊತೆ ನೋಡಲಿ ಊರೇ

(M)-ಕಂದ ಕಂದ ನೀನೇ ಚಂದ ಅಂತ ಅಂತಾನೆ

ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

(F)-ರೆಕ್ಕೆಯ ಕುದುರೆ ಏರಿ

ಬೆಳ್ಳಿ ಬೆಳ್ಳಿ ಮೋಡವ ದಾಟಿ

ಬರುವ ನನ್ನ ಅಪ್ಪಯ್ಯ ಬರುವ ನನ್ನ ಅಪ್ಪಯ್ಯ

(M)-ಕಾಮನ ಬಿಲ್ಲನ್ನು ಕೇಳಿದ

ತಕ್ಷಣ ಕೈಯ್ಯಲ್ಲಿ ಇಡುತಾನೆ

ಹುಣ್ಣಿಮೆ ಬೆಳಕ ವಸ್ತ್ರವ

ಮಾಡಿಸಿ ತಂದು ಕೊಡ್ತಾನೆ

(F)-ಕಾಮನಬಿಲ್ಲನ್ನು ಮಾಡಿಕೊಳ್ಲುವೆನು

ಕೈಯ್ಯ ಬಳೆಯಾಗಿ

ಹುಣ್ಣಿಮೆ ವಸ್ತ್ರವ

ಹೊತ್ತಿಕೊಳ್ಳುವೆನು ಕಂಬಳಿಯನ್ನಾಗಿ

(M)-ಸ್ವರ್ಗದ ಮೇನೆ ಇಂದ್ರನ ಆನೆ

ಎದುರು ಇಡುವನು ನಿನ್ನನ್ನು ಮುದ್ದಿಸಿ ಬರುವನು

(F)-ಬೊಂಬೆಯ ಮಾಡಿಕೊಂಡು ಅದರ ಜೊತೆಗೆ ಆಡುವೆನು

ರೆಕ್ಕೆಯ ಕುದುರೆ ಏರಿ

ಬೆಳ್ಳಿ ಬೆಳ್ಳಿ ಮೋಡ ದಾಟಿ

ಬರುವ ನನ್ನ ಅಪ್ಪಯ್ಯ

(M)-ಹಂಸ ನಾವೆಯಲ್ಲಿ ರಾಜಕುಮಾರಿಯ ಹಾಗೆ ನಿನ್ನನ್ನು

ಏಳು ಬೆಟ್ಟದಾಚೆ ಏಳುಕಡಲಲ್ಲೂ ಸುತ್ತಿಸಿ ಬರ್ತಾನೆ

(F)-ಅಲ್ಲಾ ಉದ್ದೀನನ ಅದ್ಭುತ ದೀಪದ ಹಾಗೆ ನನ್ನಪ್ಪ

ಎಲ್ಲ ಸಂತೋಷ ನೀಡುತ್ತಾ ನನ್ನನ್ನು ಕಂದ ಅಂತಾನೆ

(M)-ಕವಿತೆಯ ಹಾಡಿ ಖುಷಿಗಳ ನೀಡಿ

ಸುಂದರ ಕಥೆಗಳು ಹೇಳುತಾ ನಿದಿರೆ ಮಾಡಿಸುವ

(F)-ಹಿಂತಿರುಗಿ ಹೋಗದಂತೆ ನನ್ನ

ಈ ತೋಳಲ್ಲಿ ಬಂಧಿಸುವೆ

(M)-ಮೀನುಗೊ ಚುಕ್ಕಿಗಳನ್ನು ಹಿಡಿದು ಬೊಗಸೆಯಲ್ಲಿ

ತರುವ ನಿನ್ನ ಅಪ್ಪಯ್ಯ!

(F)-ಮುಡಿಯುವೆನು ಮುಡಿಯೊಳಗೆ ಮಿನುಗುವ ತಾರೆ

ನಡೆಯುವೆನು ಅವನ ಜೊತೆ ನೋಡಲಿ ಊರೇ

(M)-ಕಂದ ಕಂದ ನೀನೇ ಚಂದ ಅಂತ ಅಂತಾನೆ

ನಿನ್ನ ಕೂಡಿ ಕಣ್ಣ ಮುಚ್ಚೇ ಆಟ ಆಡ್ತಾನೆ

Nhiều Hơn Từ Spb/Sreya Jayadeep

Xem tất cảlogo