menu-iconlogo
huatong
huatong
avatar

Hesaru Poorthi

V. Harikrishnahuatong
_--RISHI--_huatong
Lời Bài Hát
Bản Ghi
ಹೆಸರು ಪೂರ್ತಿ ಹೇಳದೆ

ತುಟಿಯ ಕಚ್ಚಿಕೊಳ್ಳಲೇ

ಹರೆಯ ಏನೋ ಹೇಳಿದೆ

ಹಣೆಯ ಚಚ್ಚಿಕೊಳ್ಳಲೇ

ಮನಸು ತುಂಬಾ ಮಾಗಿದೆ

ಕೊಟ್ಟುಬಿಡಲೇ..

ನಗುತಿದೆ ನದಿ ಇದು ಯಾಕೆ?

ನೋಡುತ ನನ್ನನ್ನು..

ಹೃದಯವು ಹೆದರಲೆ ಬೇಕೇ?

ಬಯಸಲು ನಿನ್ನನ್ನು..

ಹೆಸರು ಪೂರ್ತಿ ಹೇಳದೆ

ತುಟಿಯ ಕಚ್ಚಿಕೊಳ್ಳಲೇ

ಹರೆಯ ಏನೋ ಹೇಳಿದೆ

ಹಣೆಯ ಚಚ್ಚಿಕೊಳ್ಳಲೇ

ಮನಸು ತುಂಬಾ ಮಾಗಿದೆ

ಕೊಟ್ಟುಬಿಡಲೆ..

🎼||MUSIC||🎼

ಎಳೆ ಬಿಸಿಲ ಸಂಕೋಚವೋ

ನೀ ನಗಲು ಮೈ ತಾಕಿದೆ

ನನ್ನ ಬೆನ್ನು ನಾಚುತಿಹುದು

ನೋಡುತಿರಲು ನೀ.. ನನ್ನ ಕಡೆಗೆ..

ಬಯಕೆ ಬಂದು ನಿಂತಿದೆ

ಉಗುರು ಕಚ್ಚಿಕೊಳ್ಳಲೇ

ಬೇರೆ ಏನು ಕೆಳದೆ

ತುಂಬಾ ಹಚ್ಚಿಕೊಳ್ಳಲೇ.

ಹೇಳದಂಥ ಮಾತಿದೆ

ಮುಚ್ಚಿ ಇಡಲೇ...

🎼||MUSIC||🎼

ನಿನ್ನ ತುಂಟ ಕಣ್ಣಲ್ಲಿದೆ

ಮಡಚಿಟ್ಟ ಆಕಾಶವು

ಬಿಳಿ ಹೂವಿನ ಮೌನವೂ

ನನ್ನೆದೆಯಲಿ.. ನಾ ಏನೆನ್ನಲಿ..?

ತುಂಬಾ ಮುತ್ತು ಬಂದಿದೆ

ಒಮ್ಮೆ ದೃಷ್ಟಿ ತಗೆಯಲೇ

ನನಗೆ ಬುದ್ಧಿ ಎಲ್ಲಿದೆ

ಒಮ್ಮೆ ಕಚ್ಚಿ ನೋಡಲೇ

ನಿನ್ನ ತೋಳು ನನ್ನದೇ

ಇದ್ದು ಬಿಡಲೇ...

😍THANK YOU 😍

Nhiều Hơn Từ V. Harikrishna

Xem tất cảlogo