[C]ಭತ್ತ ತೊಳು ಕೈಗೆ
ಬಯಣಿ ಮುಳ್ಳ್ ಹೆಟ್ಟಿತ್
ಮದಿಗ್ ಹೋದ ಅಣ್ಣ ಬರಲಿಲ್ಲ
ಮದಿಗ್ ಹೋದ ಅಣ್ಣ ಬರಲಿಲ್ಲ…ಬಸರೂರ
ಹೂವ ಕಂಡನ್ನ ತಗದೀರ್
[M]ಹೇ..ಸಿಂಗಾರ ಸಿರಿಯೆ.
ಅಂಗಾಲಿನಲೆ ಬಂಗಾರ ಅಗೆವ ಮಾಯೆ.
ಗಾಂಧಾರಿಯಂ.ತೆ
ಕಣ್ಮುಚ್ಚಿ ಹೊಂಗನಸ ಅರಸೊ ಛಾಯೆ
ಮಂದಹಾಸ...
ಆಹಾ..ನಲುಮೆಯಾ...
ಶ್ರಾವಣ ಮಾಸಾ...ಆಆಆ
[C]ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹಕ ಮದರಂಗಿ
ಕನ್ನ ಹಾಕಿದೆ ಮುಂಗುರುಳ ಸೋಕಿ
ನಾಗರ ಬಲ್ಯಡಿ ನಾಗನ ದರುಶಿನ
ಇಡೀನಿ ನಾರಿಯರೆ ಬನಕ್ ಹೂಗ್
ಇಡೀನಿ ನಾರಿಯರೆ ಬನಕ್ ಹೂಗ್…ಬನದ್ ಒಡತಿ
ಬೇಡಿದ್ ವರವನ್ನೆ ಕೊಡುವಳು……
(ಹೊಚ್ಚ ಹೊಸ ಹಾಗು ಎಕ್ಸ್ ಕ್ಲೂಸಿವ್ ಹಾಡಿಗಳಿಗಾಗಿ)
~ ಬಸು ತುಮಕೂರು ~
~ ಚೇತು ಶೆಟ್ಟಿ ಮಂಗಳೂರು ~
[M]ಮಾತಾಡುವ,ಮಂದಾರವೆ
ಕಂಗೊಳಿಸಬೇಡ.. ಹೇಳದೆ
[F]ನಾನೇತಕೆ ನಿನಗ್ ಹೇಳಲಿ
ನಿನ್ನ ಮೈಯ ತುಂಬಾ ಕಣ್ಣಿದೆ
[M]ಮನದಾಳದ,ರಸಮಂಜರಿ
ರಂಗೇರಿ ನಿನ್ನ ಕಾದಿದೆ
[F]ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿಯಾಗಿದೆ
[M]ಸಂಜೆಯ ಕೆನ್ನೆಯ ಮೇಲೆ,
ಬಂದು ನಾಟಿದೆ ನಾಚಿಕೆ ಮುಳ್ಳು..
ಮನದ ಮಗು, ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….
[F]ಕಣ್ಣಿಗೆ ಕಾಣೊ ಹೂವುಗಳೆಲ್ಲ
ಏನೊ ಕೇಳುತಿದೆ....
ನಿನ್ನಯ ನೆರಳ ಮೇಲೆಯೆ ನೂರು
ಚಾಡಿ ಹೇಳುತಿದೆ....
[M]ಹೇ...ಸಿಂಗಾರ ಸಿರಿಯೆ..
ಅಂಗಾಲಿನಲೆ ಬಂಗಾರ ಅಗೆವ ಮಾಯೆ.
ಗಾಂಧಾರಿಯಂ.ತೆ ಕಣ್ಮುಚ್ಚಿ
ಹೊಂಗನಸ ಅರಸೊ.. ಛಾ.ಯೆ
(ಅತ್ಯುತ್ತಮ ಡಿಜಿಟಲ್ ಕರೋಕೆಗಳಿಗಾಗಿ)
~ ಬಸು ತುಮಕೂರು ~
[M]ಶೃಂಗಾರದ, ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
[F]ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ
[M]ಸೌಗಂಧದ, ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ.
[F]ನಾ ಕಾಣುವ, ಕನಸಲ್ಲಿಯೆ
ನೀನ್ಯಾಕೆ ಬೇಲಿ ಹಾರುವೆ
[M]ಸಂಜೆಯ ಕೆನ್ನೆಯ ಮೇಲೆ.
ಬಂದು ನಾಟಿದೆ ನಾಚಿಕೆ ಮುಳ್ಳು..
ಮನದ ಮಗು, ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….
[F]ಸುಂದರವಾದ ಸೋಜಿಗವೆಲ್ಲಾ
ಕಣ್ಣ ಮುಂದೆ ಇದೆ
ಬಣ್ಣಿಸ ಬಂದ ರೂಪಕವೆಲ್ಲ
ತಾನೆ ಸೋಲುತಿದೆ....
[M]ಮಂದಹಾಸ..
ಆಹಾ ನಲುಮೆಯ...
ಶ್ರಾವಣ ಮಾಸ.