ಗಾಯನ : ವಿಷ್ಣುವರ್ಧನ್, ಪಿ.ಸುಶೀಲ
ಅಪ್ಲೋಡ್: ರವಿ ಎಸ್ ಜೋಗ್ (21 06 2018)
M: ಮಡಿಲಲ್ಲಿ ಮಗುವಾಗಿ ನಾನು..
ಮಮತೇಯ ಸೆಲೆಯಾಗಿ ನೀನು..
ಇರುವಾಗ ಬಾಳೆಲ್ಲ ಜೇನು...
ಕನಸೆಲ್ಲ ಹುಸಿಯಾಯಿತೇನು..
F: ಮಡಿಲಲ್ಲಿ ಮಗುವಾಗಿ ನೀನು
ಮಮತೇಯ ಸೆಲೆಯಾಗಿ ನಾನು...
ಇರುವಾಗ ಬಾಳೆಲ್ಲ ಜೇನು...
ಕನಸೆಲ್ಲ ನನಸಾಗದೇನು...
M: ಮಡಿಲಲ್ಲಿ ಮಗುವಾಗಿ ನಾನು..
Music
M: ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
M: ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
M: ಹಗಲು, ಇರುಳು, ಮನದಲ್ಲೆ ನೆಲೆಸಿ,
ಹಗಲು, ಇರುಳು, ಮನದಲ್ಲೆ ನೆಲೆಸಿ..
ದೂರಕೆ ಎಲ್ಲಿ ತೆರಳಿರುವೆ
F: ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದು ಕೇಡೊಂದು ತರನು
M: ಮಡಿಲಲ್ಲಿ ಮಗುವಾಗಿ ನಾನು
ಮಮತೇಯ ಸೆಲೆಯಾಗಿ ನೀನು..
F: ಇರುವಾಗ ಬಾಳೆಲ್ಲ ಜೇನು
ಕನಸೆಲ್ಲ ನನಸಾಗದೇನು
M: ಮಡಿಲಲ್ಲಿ ಮಗುವಾಗಿ ನಾನು
Music
F: ಮನೆಯೆಂಬ ಗುಡಿಗೆ,ಬೆಳಕಾಗಿ ಇರುವೆ,
ಜತೆಯಲ್ಲೆ ಬರುವೆ, ನೆರಳಾಗೆ ನಡೆವೆ,
F: ಮನೆಯೆಂಬ ಗುಡಿಗೆ,ಬೆಳಕಾಗಿ ಇರುವೆ,
ಜತೆಯಲ್ಲೆ ಬರುವೆ, ನೆರಳಾಗೆ ನಡೆವೆ,
F: ಬಿಸಿಲೋ,ಮಳೆಯೋ, ನಿಮ್ಮಲ್ಲಿ ಬೆರೆವೆ
ಬಿಸಿಲೋ, ಮಳೆಯೋ, ನಿಮ್ಮಲ್ಲಿ ಬೆರೆವೆ
ಸಂದೇಹ ಬೇಡ ಕಲೆತಿರುವೆ
M: ಮಿಗಿಲಾಗಿ ಅವನೊಬ್ಬ ಇಹನು
ನಮಗೆಂದು ಕೇಡೊಂದು ತರನು
F: ಮಡಿಲಲ್ಲಿ ಮಗುವಾಗಿ
M: ನಾನು
M: ಮಮತೇಯ ಸೆಲೆಯಾಗಿ
F: ನಾನು
F: ಇರುವಾಗ ಬಾಳೆಲ್ಲ
M:ಜೇನು..
M F: ಕನಸೆಲ್ಲ ನನಸಾಗದೇನು
ಲಲಲಲ...ಲಾ...ಲಾ...
(S) ರವಿ ಎಸ್ ಜೋಗ್ (S)