menu-iconlogo
logo

Banina Anchinda

logo
歌词
ಬಾನಿನ ಅಂಚಿಂದ ಬಂದೆ ಬಳಿ ನಿಂದೆ

ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರುವೆ,

ಬಾನಿನ ಅಂಚಿಂದ ಬಂದೆ ಬಳಿ ನಿಂದೆ,

ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರುವೆ

ಬಾನಿನ ಅಂಚಿಂದ ಬಂದೆ....

ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು

ನಾದ ಕೇಳಿ ಮೊಗ್ಗು ಹೂವಾಗಿದೆ..

ಹೂವೂ ನಗಲು ಅದರ ಜೇನ ಒಡಲು

ಕಂಡು ದುಂಬಿ ಅಲ್ಲಿ ಹಾರಾಡಿದೆ...

ಬೆಳಕು ಮೂಡುತಿದೆ...

ಸೊಗಸು ಕಾಣುತಿದೆ...

ಬೆಳಕು ಮೂಡುತಿದೆ...

ಸೊಗಸು ಕಾಣುತಿದೆ...

ಅ......ಅ......ಹೊಸತು ಜೀವ ತುಂಬುವಂತೆ

ಬಾನಿನ ಅಂಚಿಂದ ಬಂದೆ

ನಿನ್ನ ಕಂಡೆ ಒಲವಿಂದ ಇಂಪಾಗಿ ಉದಯರಾಗ ಹಾಡುತಿರವೆ

ಬಾನಿನ ಅಂಚಿಂದ ಬಂದೆ....

ತಾಕಿಟ ಧೀಂತ ತನದಿನತರನ

ತಕಟತ ಧಿಕಿಟತ ತಕಟತ ಧಿಕಿಟತ

ತೊಂತಕಿಟತ ತೊಂತಕಿಟತ ತಕಟತ ಧಿಕಿಟತಕ ತಾಕಿಟ ತ

ತಾಕಿಟ ತ

ಎಲೆಯ ಮೇಲೆ ಹಿಮದ ಮಣಿಯ ಸಾಲು

ಬೆಳಕ ಕಂಡು ಹೊಳೆವ ಮುತ್ತಾಗಿದೆ

ಮರದ ಮೇಲೆ ಕುಳಿತ ಗಿಳಿಯ ಸಾಲು

ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ...

ಕಡಲ ಅಲೆಅಲೆಯು..

ಚಿಮ್ಮಿ ಕುಣಿಯುತಿರೆ..

ಕಡಲ ಅಲೆಅಲೆಯು..

ಚಿಮ್ಮಿ ಕುಣಿಯುತಿರೆ..

ಅ....ಅ...ಭುವಿಯ ಅಂದ ಕಾಣಲೆಂದು

ಬಾನಿನ ಅಂಚಿಂದ ಬಂದೆ ಬಳಿ ನಿಂದೆ

ಬೆಳಕನ್ನು ಚೆಲ್ಲುತ ಉದಯರಾಗ ಹಾಡುತಿರವೆ

ಬಾನಿನ ಅಂಚಿಂದ ಬಂದೆ

ಬಳಿ ನಿಂದೆ..ಎ.ಎ.ಎ‌‌‌..‌.