ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಆಡು ಆನೆಯ ನುಂಗಿ
ಗೋಡೆ ಸುಣ್ಣಾವ ನುಂಗಿ
ಆಡು ಆನೆಯ ನುಂಗಿ
ಗೋಡೆ ಸುಣ್ಣಾವ ನುಂಗಿ
ಆಡಲು ಬಂದ ಪಾತರದವಳ
ಮದ್ದಳೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಒಳ್ಳು ಒನಕೆಯ ನುಂಗಿ
ಕಲ್ಲು ಗೂಟಾವ ನುಂಗಿ
ಒಳ್ಳು ಒನಕೆಯ ನುಂಗಿ
ಕಲ್ಲು ಗೂಟಾವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೆ
ನೆಲ್ಲು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಕೋಡಗನ ಕೋಳಿನುಂಗಿತ್ತಾ
ನೋಡವ್ವ ತಂಗಿ...
ಕೋಡಗನ ಕೋಳಿನುಂಗಿತ್ತಾ
ಹಗ್ಗ ಮಗ್ಗಾವ ನುಂಗಿ
ಮಗ್ಗಾವ ಲಾಳಿ ನುಂಗಿ
ಹಗ್ಗ ಮಗ್ಗಾವ ನುಂಗಿ
ಮಗ್ಗಾವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನೆ
ಮಣಿಯು ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಕೋಡಗನ ಕೋಳಿನುಂಗಿತ್ತಾ ನೋಡವ್ವ ತಂಗಿ...
ಕೋಡಗನ ಕೋಳಿ ನುಂಗಿತ್ತಾ
ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯಾ ನುಂಗಿ
ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯಾ ನುಂಗಿ
ಗೋವಿಂದಾ ಗುರುವಿನ ಪಾದ
ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ
ಗೋವಿಂದಾ ಗುರುವಿನ ಪಾದ
ನನ್ನನೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ