ಹಾಲುಂಡ ತವರನ್ನು
ಮಗಳೇ.... ನೆನೆಯೇ.....
ನಿನ್ನಾ ಮನೆಗೆ ನೀ ನಡೆಯೇ ..
ಹಾಲುಂಡ ತವರನ್ನು
ಮಗಳೇ ..... ನೆನೆಯೇ ....
ನಿನ್ನಾ ಮನೆಗೆ ನೀ ನಡೆಯೇ....
ಹಾಲುಂಡ ತವರನ್ನು
ಮಗಳೇ ..... ನೆನೆಯೇ ....
ರಂಗನಾಥ್_
ನೀ ನಕ್ಕರೇ ತವರಿಗೇ ಹಾಲು,
ನೀ ಅತ್ತರೇ ನಮಗೆಲ್ಲಾ ಪಾಲೂ..
ನೀ ಹೆತ್ತರೇ ನಮಗೇ ದಾನ,...
ನಿನ್ನ ನಡತೇ ತವರೂರ ಮಾನ..
ಹಾಲುಂಡ ತವರನ್ನು
ಮಗಳೇ .... ನೆನೆಸೇ,.....
ನಿನ್ನಾ ಮನೆಯ ನೀ ಉಳಿಸೇ..
ಹಾಲುಂಡ ತವರನ್ನು
ಮಗಳೇ.... ನೆನೆಯೇ ....
─ರಂಗನಾಥ್_─
ನೆರೆಮನೆಗೆ ಹೊರೆಯಾಗಬೇಡಾ..,
ನಿನ್ನ ಮನೆಗೇ ಹಗೆಯಾಗಬೇಡಾ
ಬಲ್ಲಿದರ ಮಾತೆಲ್ಲ ರಗಳೆ,....
ಮನೆ ಒಡೆಯೋ ಮಾತೇಕೆ ಮಗಳೇ,
ಹಾಲುಂಡ ತವರನ್ನು
ಮಗಳೇ..... ತ್ಯಜಿಸೇ...
ನಿನ್ನಾ ಮನೆಯ ನೀ ಮೆರೆಸೆ
ಹಾಲುಂಡ ತವರನ್ನು
ಮಗಳೇ.... ನೆನೆಯೇ .....
【ರಂಗನಾಥ್ 】
ಮಗಳಾಗಿ ಸುಖವನ್ನು ತಂದೆ,
ಸೊಸೆಯಾಗಿ ಸುಖ ಕಾಣು ಮುಂದೆ
ತವರೂರ ಬನದಲ್ಲಿ ಬೆಳೆದೆ,
ಪತಿಯೂರ ಫಲವಾಗಿ ನಡೆದೆ
ಹಾಲುಂಡ ತವರೆಂದು
ನಿನದೇ... ನಿನದೇ...
ನಿನ್ನಾ ನೆನಪು ದಿನ ನಮಗೆ
ಹಾಲುಂಡ ತವರನ್ನು
ಮಗಳೇ ..... ನೆನೆಯೇ .....
ನಿನ್ನಾ ಮನೆಗೆ ನೀ ನಡೆಯೇ ..
ಹಾಲುಂಡ ತವರನ್ನು
ಮಗಳೇ..... ನೆನೆಯೇ .....