[ಗಂಡು] ಹಾ... ಹ... ಹಾ...
[ಹೆಣ್ಣು] ಹಾ... ಹ... ಹಾ...
[ಗಂಡು] ಆಡುವ ತೇಲಾಡುವಾ
ಜೋಡಿ ನಾವಾಗುವಾ ಆ ಹ
ಯವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ
[ಹೆಣ್ಣು] ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೆರೀ
ಮಾತು ಮೌನ ಮೀರೀ
ಮೆರೆದಾಡುವ
ಆಡುವ.....
[ಗಂಡು] ತೇಲಾಡುವಾ....
[ಗಂಡು] ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
ಎಲ್ಲೋ ಮೂಡಿದ ಹೂ ಮಲ್ಲಿಗೆ
ಪರಿಮಳವಾ ಬೀರುತಿದೆ ಇಂದೇತಕೆ
[ಹೆಣ್ಣು] ಮೆಚ್ಚಿನ ಸಂಗಾತೀ ಮೆಚ್ಚಿನ ಸಂಪ್ರೀತಿ
ಸಾರಿ ಸೆಳೆಯುತ್ತಿದೆ ಸಿರಿ ಸಂಗಕೇ
[ಗಂಡು] ತಂಗಾಳಿ ಬೀಸಿರಲು ಮೈಮನ ಹೂವಾಯ್ತು
[ಹೆಣ್ಣು] ಸಂತೋಷ ತುಳುಕಾಡಿ ತನು ತೂಗಾಡಿತು
[ಗಂಡು] ಆಡುವ ತೇಲಾಡುವಾ
[ಇಬ್ಬರು] ಜೋಡಿ ನಾವಾಗುವಾ ಆ ಹ
[ಹೆಣ್ಣು] ಯವ್ವನವೆಂಬ ದಾರಿ
ಸ್ನೇಹದ ಗಂಗೆ ಸೇರಿ
ಪ್ರೀತಿಯ ಜೇನ ಹೀರಿ
ಹರಿದಾಡುವಾ
[ಗಂಡು] ಆಸೆಯ ಹಕ್ಕಿ ಹಾರಿ
ಕಾಮನ ಬಿಲ್ಲನೆರೀ
ಮಾತು ಮೌನ ಮೀರೀ
ಮೆರೆದಾಡುವ
ಆಡುವ
[ಹೆಣ್ಣು] ತೇಲಾಡುವಾ....
[ಹೆಣ್ಣು] ಎಲ್ಲೇ ಮೀರಿದ ಬಾನಾಡಿಯು
ಇಂಪಾಗಿ ಹಾಡುತಿದೆ ತಾನೇತಕೆ
ಎಲ್ಲೇ ಮೀರಿದ ಬಾನಾಡಿಯು….
ಇಂಪಾಗಿ ಹಾಡುತಿದೆ ತಾನೇತಕೆ
[ಗಂಡು] ಅಕ್ಕರೆ ಒಡನಾಡೀ ನಕ್ಕರೆ ಜೊತೆಗೂಡಿ
ಮೋಹ ಮಿಡಿಯುತಿದೆ ತುಂಟಾಟಕೆ
[ಹೆಣ್ಣು] ಕಣ್ಣೋಟ ಕೂಡಿರಲು ಭಾವನೆ ಬೆಳಕಾಯ್ತು
[ಗಂಡು] ಸಂಬಂಧ ಸರಿಹೊಂದಿ ಹೊಸ ಬಾಳಾಯಿತು
[ಹೆಣ್ಣು] ಆಡುವ ತೇಲಾಡುವಾ
[ಇಬ್ಬರು] ಜೋಡಿ ನಾವಾಗುವಾ ಆ ಹ
[ಗಂಡು] ಯವ್ವನವೆಂಬ ದಾರಿ
[ಹೆಣ್ಣು] ಸ್ನೇಹದ ಗಂಗೆ ಸೇರಿ
[ಗಂಡು] ಪ್ರೀತಿಯ ಜೇನ ಹೀರಿ
[ಇಬ್ಬರು] ಹರಿದಾಡುವಾ
[ಹೆಣ್ಣು] ಆಸೆಯ ಹಕ್ಕಿ ಹಾರಿ
[ಗಂಡು] ಕಾಮನ ಬಿಲ್ಲನೆರೀ
[ಹೆಣ್ಣು] ಮಾತು ಮೌನ ಮೀರೀ
[ಇಬ್ಬರು] ಮೆರೆದಾಡುವ
[ಗಂಡು] ಹಾ... ಹ... ಹಾ...
[ಹೆಣ್ಣು] ಹಾ... ಹ... ಹಾ...
[ಗಂಡು] ಹೋ... ಓ ... ಹೋ
[ಹೆಣ್ಣು] ಹೋ... ಓ ... ಹೋ
[ಗಂಡು] ಹೇ ..... ಎ..... ಹೇ
[ಇಬ್ಬರು] ಹೇ ..... ಎ..... ಹೇ...........