ಹೆಣ್ಣು : ಬೆನ್ನಿನ ಹಿಂದೆ ಬಂದು ನೀನು
ಕೆನ್ನೆಗೆ ಮುತ್ತಿಡುವಾಗ
ಬೆನ್ನಿನ ಹಿಂದೆ ಬಂದು ನೀನು
ಕೆನ್ನೆಗೆ ಮುತ್ತಿಡುವಾಗ ಹಾಂ
ಮೀಸೆಯೂ ಚುಚ್ಚಿ ಆಸೆಯೂ ಹೆಚ್ಚಿ
ಮಿಂಚಿನ ಹಾಗೆ ಮೈ ಕೈ ಎಲ್ಲಾ
ಜುಮ್ಮ ಎಂದಿತು ನಲ್ಲ
ಈ ಬಾಲೆಯ
ಬಯಕೆಯ ನೀ ತಣಿಸು
ಬಾ ಇನಿಯ
ಗಂಡು : ತೊಂಡೆಯ ಹಣ್ಣ
ತುಟಿಯ ಹೆಣ್ಣಾ
ಬಳುಕೋ ಸೊಂಟ ಸಣ್ಣ
ಬಿಂಕದ ನಿನ್ನ
ಜಿಂಕೆಯ ಕಣ್ಣ
ನೋಟಕೆ ನಾನು
ಸೋತು ಹೋದೆ ನಲ್ಲೆ
ನಿನ್ನಾಸೆಯ ಬಲ್ಲೇ
ವ್ಯಯ್ಯಾರದ
ದಂತದ ಮೈಯ್ಯವಳೇ
ಬಾ ಬಳಿಗೆ
ಬಿಸಿ ತಂದಾಗ
ಪ್ರಾಯ ಉಕ್ಕಿ ಹರಿದು
ಬಿಸಿ ತಂದಾಗ
ಇದು ಚೆಲ್ಲಾಟದ ವಯಸು
ತುಟಿಯ ಅಂಚಿಗೆ
ತುಟಿ ತಂದಾಗ ಆಂ..
ಹೊಸ ರೋಮಾಂಚನ ಸೊಗಸು
ಸತಿ ನಾನಲ್ಲವಾ
ಪತಿ ನೀನಲ್ಲವಾ
ರತಿ ಮನ್ಮಥರು ನಾವಾಗುವಾ
ಇನಿಯಾ ಬಾ ಸನಿಹಾ
ಗಂಡು : ತೊಂಡೆಯ ಹಣ್ಣ
ತುಟಿಯ ಹೆಣ್ಣಾ
ಬಳುಕೋ ಸೊಂಟ ಸಣ್ಣ
ಬಿಂಕದ ನಿನ್ನ
ಜಿಂಕೆಯ ಕಣ್ಣ
ನೋಟಕೆ ನಾನು
ಸೋತು ಹೋದೆ ನಲ್ಲೆ
ನಿನ್ನಾಸೆಯ ಬಲ್ಲೇ
ವ್ಯಯ್ಯಾರದ
ದಂತದ ಮೈಯ್ಯವಳೇ
ಬಾ ಬಳಿಗೆ..ಹೇ ಹೇ
ಗಂಡು : ಗಾಳ ಹಾಕಿ ಸೆಳೆವ
ನೀಳ ಜಡೆಯೋಳೆ
ಗಾಳ ಹಾಕಿ ಸೆಳೆವ
ನೀಳ ಜಡೆಯೋಳೆ
ನೀ ನುಡಿದಂತೆ ನಾ ನಡೆವೆ
ತಾಳ ಹಾಕಿ ಕುಣಿಸಿ
ಕಣ್ಣು ಹೊಡೆಯೊಳೆ
ನೀ ಕೇಳಿದ್ದು ನಾ ಕೊಡುವೇ
ಸರಸ ಆಡೋಣ ಬಾ
ಸಿನಿಮಾ ನೋಡೋಣ ಬಾ
ಜೊತೆ ಒಂದಾಗಿ ಸೇರೋಣ ಬಾ
ಚೆಲುವೆ ಬಾ ಬಳಿಗೆ ಹೇ
ಹೆಣ್ಣು : ಬೆನ್ನಿನ ಹಿಂದೆ
ಬಂದು ನೀನು
ಕೆನ್ನೆಗೆ ಮುತ್ತಿಡುವಾಗ
ಗಂಡು : ಬಿಂಕದ ನಿನ್ನ
ಜಿಂಕೆಯ ಕಣ್ಣ
ನೋಟಕೆ ನಾನು
ಸೋತು ಹೋದೆ ನಲ್ಲೆ
ಹೆಣ್ಣು : ಜುಮ್ಮ ಎಂದಿತು ನಲ್ಲ
ಈ ಬಾಲೆಯ ಬಯಕೆಯ ನೀ ತಣಿಸು
ಬಾ ಇನಿಯ...
ಗಂಡು : ಓಯ್.. ದಂತದ ಮೈಯ್ಯವಳೇ
ಬಾ ಬಳಿಗೆ...
ಇಬ್ಬರು : ಲಾಲಾಲ ಲಾಲಾಲ ಲಾಲಾಲ