menu-iconlogo
huatong
huatong
sjanakis-p-balasubrahamanayam-olida-jeeva-jotheyaliralu-cover-image

Olida Jeeva Jotheyaliralu

S.Janaki/S P Balasubrahamanayamhuatong
screamingferrethuatong
歌词
作品
M) ಒಲಿದ ಜೀವ ಜೊತೆಯಲಿರಲು

ಬಾಳು ಸುಂದರ...

ಒಲಿದ ಜೀವ ಜೊತೆಯಲಿರಲು

ಬಾಳು ಸುಂದರ...

F)ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ ಆ..

M F) ಒಲಿದ ಜೀವ ಜೊತೆಯಲಿರಲು

ಬಾಳು ಸುಂದರ......

M) ನಯನ ನಯನ ಬೆರೆತ ಸಮಯ

ಬಾನಲ್ಲಿ ತೇಲಾಡಿದಂತೆ....ಏ ಏ

ನಯನ ನಯನ ಬೆರೆತ ಸಮಯ

ಬಾನಲ್ಲಿ ತೇಲಾಡಿದಂತೆ

ಕರವ ಹಿಡಿದಾಗ ನಗುತ ನಡೆದಾಗ

ಭುವಿಯೇ ಸ್ವರ್ಗದಂತೆ...

F) ಸನಿಹ ಕುಳಿತು ನುಡಿವ ನುಡಿಯು

ಇಂಪಾದ ಹಾಡಿನಂತೆ...ಏಏ

ಸನಿಹ ಕುಳಿತು ನುಡಿವ ನುಡಿಯು

ಇಂಪಾದ ಹಾಡಿನಂತೆ

ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ

ಬದುಕು ಕವಿತೆಯಂತೆ...

M) ಕಣ್ಣೀರು ಪನ್ನೀರ ಹನಿಯಂತೆ...

F) ಒಲಿದ ಜೀವ ಜೊತೆಯಲಿರಲು

ಬಾಳು ಸುಂದರ....

M)ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ...ಆ

M F) ಒಲಿದ ಜೀವ ಜೊತೆಯಲಿರಲು

ಬಾಳು ಸುಂದರ.....

M) ಆಹಾಹ....ಹಾ..ಹಾ.ಹಾ...

F) ದದ ಪದಪ ಪಪ ದಪಗ

ಆಆಆಆ.......

M) ಪಗದ ಪಗದ ಪಗದ ಪಗದ

F) ಆಆಆಆ....

M) ಆಆಆ.....

F) ಉರಿವ ಬಿಸಿಲ ಸುರಿವ ರವಿಯೇ

ತಂಪಾದ ಚಂದ್ರನಂತೆ....ಏಏ

ಉರಿವ ಬಿಸಿಲ ಸುರಿವ ರವಿಯೇ

ತಂಪಾದ ಚಂದ್ರನಂತೆ..ತುಳಿದ ಮುಳ್ಳೆಲ್ಲ

ಅರಳಿ ಹೂವಂತೆ ಹಾದಿ ಮೆತ್ತೆಯಂತೆ..

M) ಆಆ......

F) ಆಆಆಆ...

M) ಆಆ...

F) ಆಆ...

M) ಮೊಗದಿ ಹರಿವ ಬೆವರ ಹನಿಯು

ಒಂದೊಂದು ಮುತ್ತಿನಂತೆ....ಏಏಏಏ

ಮೊಗದಿ...ಹರಿವ ಬೆವರ ಹನಿಯು

ಓಂದೊಂದು ಮುತ್ತಿನಂತೆ...

ಏನೊ ಉಲ್ಲಾಸ ಏನೊ ಸಂತೋಷ

ಮರೆತು ಎಲ್ಲ ಚಿಂತೆ...

F)ಒಲವಿಂದ ದಿನವೊಂದು ಕ್ಷಣದಂತೆ...ಏಏ..

M) ಒಲಿದ ಜೀವ ಜೊತೆಯಲಿರಲು

ಬಾಳು..ಸುಂದರ....

F) ಒಲಿದ ಜೀವ ಜೊತೆಯಲಿರಲು

ಬಾಳು..ಸುಂದರ....

M)ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ...ಆ

M F) ಒಲಿದ ಜೀವ ಜೊತೆಯಲಿರಲು ಬಾಳು ಸುಂದರ....

M) ಈ....ಬಾಳು ಸುಂದರ

F) ಈ.....ಬಾಳು ಸುಂದರ....

更多S.Janaki/S P Balasubrahamanayam热歌

查看全部logo