menu-iconlogo
huatong
huatong
avatar

Aananda Paramananda Clear Track HQ

Spb/Nandithahuatong
shadow_kyrahuatong
歌词
作品
ಆ...ನಂದ.. ಪರಮಾನಂದ....

ಪರಮಾನಂದ....

ಆ....ನಂದ.. ಪರಮಾನಂದ....

ಪರಮಾನಂದ..

ತಾಯಿ ತಂದ ಜನುಮದಿಂದ

ಜಗದಾನಂದಾ.

ಗುರುವು ತಂದ ಪುಣ್ಯದಿಂದ

ಜನುಮಾನಂದ

ನಿಸರಿ ಸರಿಗ....

ಮಮರಿಸ ನಿಸರಿಸ ದನಿಪಮ ಗಮರಿಸ

ಆ....ನಂದ.. ಪರಮಾನಂದ....

ಪರಮಾನಂದ.

ಬಾಳಿನ ಜೊತೆಬಂದ ಸಕಲಕೂ ಸಮನಾದ

ಮಡದಿಯ ನೆರಳಿಂದ ಧರ್ಮಾನಂದ...

ಹೃದಯದ ನೋವನ್ನು..ಪ್ರೀತಿಯ ಸುಧೆ ಮಾಡಿ

ನಾಲ್ವರ ನಗಿಸುವುದೆ ..

ಮನುಜಾನಂದ

ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ

ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ

ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...

ಗುರುವು ತಂದ ಪುಣ್ಯದಿಂದ ಜನುಮಾನಂದ..

ನಿಸರಿ ಸರಿಗ....

ಮಮರಿಸ ನಿಸರಿಸ ದನಿಪಮ ಗಮರಿಸ

ಆ....ನಂದ.. ಪರಮಾನಂದ....

ಪರಮಾನಂದ.

ವಂಶದ ಲತೆಯಲ್ಲಿ ವಂಶದ ಸುಮವಾಗಿ

ಅರಳುವ ಮಗನಿಂದ ಮಧುರಾನಂದ...

ಬೆಳೆಯುವ ಶಶಿಯಂತೆ ಮಗನು ಮೆರೆದಾಗ

ಹೆತ್ತವರೊಡಲಲ್ಲಿ ಸ್ವರ್ಗಾನಂದ...

ದಾನ... ಧರ್ಮಗಳ ಬಲದಲ್ಲೇ.. ಆ ಮಗನು

ದಾನ... ಧರ್ಮಗಳ ಬಲದಲ್ಲೇ.. ಆ ಮಗನು

ನೂರು ಕಾಲ ಬಾಳಿದಾಗ ಪುಣ್ಯಾನಂದ...

ನಾವು ತಂದ ಪುಣ್ಯದಲ್ಲೆ ನಮಗಾನಂದ..

ನಿಸರಿ ...ಸರಿಗ....

ಮಮರಿಸ ನಿಸರಿಸ ದನಿಪಮ ಗಮರಿಸ

ಆ....ನಂದ.. ಪರಮಾನಂದ....

ಪರಮಾನಂದ...

ಪರಮಾನಂದ...

ಪರಮಾನಂದ...

更多Spb/Nanditha热歌

查看全部logo