menu-iconlogo
logo

Endhendhu Ninnanu Eradu kanasu

logo
歌词
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ

ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ

ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ

ನಿಲ್ಲದೆ ಓಡಿಓಡಿ ನಿನ್ನ ಸೇರುವೆ ಸೇರುವೆಸೇರುವೆ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ

ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ನೀ ಹೂವಾದರೆ ನಾನು ಪರಿಮಳವಾಗಿ

ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ

ಓಹೋಹೋಹೋ. ನೀ ಮುಗಿಲಾದರೆ ನಾ ನವಿಲಾಗುವೆ

ತೇಲುವನಿನ್ನನೋಡಿನೋಡಿ ಹಾಡುವೆಕುಣಿಯುವೆನಲಿಯುವೆ

ಎಂದೆಂದೂ ನಿನ್ನನು ಮರೆತು

ಬದುಕಿರಲಾರೆ

ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ

aa

aa

oo

oo

aaaaha ha haaa aaaaa….

ಸಾವಿರ ಜನುಮವೇ ಬರಲಿ ಬೇಡುವುದೊಂದೇ

ನನ್ನವಳಾಗಿರು ನೀನು ಎನ್ನುವುದೊಂದೇ

ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ

ನಾನಿನ್ನ ಜೋಡಿಯಾಗಿ ಎಂದು ಬಾಳುವೆಬಾಳುವೆಬಾಳುವೆ

ಎಂದೆಂದೂ

ಎಂದೆಂದೂ

ನಿನ್ನನು ಮರೆತು

ಬದುಕಿರಲಾರೆ

ಇನ್ನೆಂದು

ಇನ್ನೆಂದು

ನಿನ್ನನು ಅಗಲಿ

ನಾನಿರಲಾರೆ

ಒಂದು ಕ್ಷಣ ನೊಂದರು ನೀ ನಾ ತಾಳಲಾರೆ

aaa ha haaa aaa. Hmmmm hmm …

Endhendhu Ninnanu Eradu kanasu Vani Jairam - 歌词和翻唱