ಚೆಲುವಿನ ತಾ..ರೆ ತಾ..ರೆ ತಾ..ರೆ
ಒಲವಿನ ಧಾ..ರೆ
ಭಾಮೆ ನೀ ಬಾರೇ
ಅಗಲಿರಲಾರೆ
ಚೆಲುವಿನ ತಾ..ರೆ
ಒಲವಿನ ಧಾ..ರೆ
ಭಾಮೆ ನೀ ಬಾರೇ ಅಗಲಿರಲಾರೆ
ಕನಸಲು ನೀನೆ ಮನಸಲು ನೀನೆ
ಕನಸಲು ನೀ..ನೆ ಮನಸಲು ನೀನೆ
ನನ್ನೀ ಪ್ರಾಣದ ಪ್ರಾಣವು ನೀನೆ
ಕಾಣದೆ ನಿನ್ನ ನಾನಿರಲಾರೆ
ಸ್ವಾಮಿಯು ನೀನು
ಸೇವಕಿ ನಾನು
ಪ್ರೇಮದ ಪೂಜೆಗೇ.. ನಾ ಕಾದಿಹೆನು
ಪ್ರೇಮದ ಪೂಜೆಗೇ.. ನಾ ಕಾದಿಹೆನು
ನೆನೆಯುತ ನಿನ್ನ
ಕರೆಯುವ ಮುನ್ನ
ದರುಶನಕೆಂದೆ ಧಾವಿಸಿ ಬಂದೆ
ನನ್ನೇ ನಿನಗೆ ಕಾಣಿಕೆ ತಂದೆ
ಸ್ವೀಕರಿಸೆನ್ನ ಕರುಣಿಸಿ ಇಂದೇ
ಓ ನಿನ್ನಲೇ ನಾನು ಒಂದಾಗಿರಲು
ಪ್ರೇಮದ ಕಾಣಿಕೆ ನನಗಿನ್ನೇಕೆ...
ಭಾಮೆ ನೀ ಬಾರೇ ಅಗಲಿರಲಾರೆ
ಸ್ವಾಮಿಯು ನೀನು
ಸೇವಕಿ ನಾನು
ಪ್ರೇಮದ ಪೂಜೆಗೇ.. ನಾ ಕಾದಿಹೆನು
ಪ್ರೇಮದ ಪೂಜೆಗೇ.. ನಾ ಕಾದಿಹೆನು
ಆಸೆಯ ಲತೆಗೇ ಆಸರೆಯಾದೆ
ಬಾಳಿನ ಬಾ..ನಿಗೇ ಭಾಸ್ಕರನಾದೆ
ಪ್ರೇಮದ ಸುಮದ ಸೌರಭವಾದೆ
ಪ್ರಣಯದ ಪಯಣಕೆ ನೀ ಜೊತೆಯಾದೆ
ಓ ನಿನ್ನನುರಾಗದ ಉಯ್ಯಾಲೆಯಲಿ
ತೂಗುತ ಆಡುವ ಭಾಗ್ಯವ ತಂದೇ..
ಬಾ ಹೃದಯೇಶ.. ಪ್ರಭು ಶ್ರೀನಿವಾಸ
ಕನಸಲು ನೀ..ನೆ
ಮನಸಲು ನೀನೆ
ನನ್ನೀ ಪ್ರಾಣದ ಪ್ರಾಣವು ನೀನೆ
ಕಾಣದೆ ನಿನ್ನ ನಾನಿರಲಾರೆ