ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ
ಪೆದ್ದು ಪೆದ್ದಾಗಿ ನೀನಾಡುವಾಗ ನಿನ್ನ ಚಂದ ಇನ್ನೂ ಚಂದ
ಜೀವನ ಹೂಬನ, ಚಂದ ಈಗ ನಿನ್ನಿಂದ
ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ
माही वे, आजा रे, आजा, माही वे
ओ, आजा रे, आजा, माही वे
ಹುಯ್ಯೋ ರೆ ಹುಯ್ಯೋ, ಹುಯ್ಯೋ ರೆ ಹುಯ್ಯೋ
ಹುಯ್ಯೋ ರೆ ಹುಯ್ಯೋ-ಹುಯ್ಯೋ ರೆ
ಹುಯ್ಯೋ ರೆ ಹುಯ್ಯೋ, ಹುಯ್ಯೋ ರೆ ಹುಯ್ಯೋ
ಹುಯ್ಯೋ ರೆ ಹುಯ್ಯೋ-ಹುಯ್ಯೋ ರೆ
ನಿನ್ನೊಂದಿಗೆ ಹೇಗಿದ್ದರೂ ಆಯಾಸ, ಬೇಜಾರು ಆಗೋದಿಲ್ಲ
ನೀನಿಲ್ಲದ ಸಂತೋಷವು ನಂಗೆಂದೂ ಸಂತೋಷ ನೀಡೋದಿಲ್ಲ
ನೀನಾಡುವ ಸುಳ್ಳು ಸಹ ನಿನ್ನಷ್ಟೇ ಮುದ್ದು ಕಣೋ
ನನ್ನನು ಕಾಡುವ ಕಾಡುಪಾಪ ನೀನೇನೇ
ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ
ಆ ಚಂದ್ರನ ಕಚ್ಚಿ ದಿನ ತಿನ್ನೋದು ನೀನಂತ ಗೊತ್ತಾಗಿದೆ
ರಾತ್ರಿಯೆಲ್ಲ ತಾರೆಗಳ ದೋಚೋದು ನೀನನ್ನೋ ಶಂಕೆ ಇದೆ
ನನ್ನ ಎದೆ ಬೀದಿಯಲಿ ಹೊಂಗನಸ ವ್ಯಾಪಾರಿ ನೀ
ನಿನ್ನದೇ ಗುಂಗಿನ ಹುಚ್ಚಿ ನೋಡು ನಾನೀಗ
ಮುದ್ದು ಮುದ್ದಾಗಿ ಮಾತಾಡುವಾಗ ನಿನ್ನ ಚಂದ ಇನ್ನೂ ಚಂದ
ಪೆದ್ದು ಪೆದ್ದಾಗಿ ನೀನಾಡುವಾಗ ನಿನ್ನ ಚಂದ ಇನ್ನೂ ಚಂದ
ಜೀವನ ಹೂಬನ, ಚಂದ ಈಗ ನಿನ್ನಿಂದ