menu-iconlogo
huatong
huatong
avatar

Janumada Gelathi Chaluvina Chitthara

Chetan Soscahuatong
montanarhodeshuatong
歌詞
作品
ಜನುಮದಾ ಗೆಳತಿ ಉಸಿರಿನಾ ಒಡತಿ

ಮರೆತರೆ ನಿನ್ನ ಮಡಿವೆನು ಚಿನ್ನ

ನನ್ನುಸಿರೇ... ನನ್ನುಸಿರೇ...

ನನ್ನುಸಿರೇ... ನನ್ನುಸಿರೇ...

ಜೊತೆಯಲಿರುವೆ ಎ೦ದೂ

ಜನುಮದಾ ಗೆಳತಿ ಉಸಿರಿನಾ ಒಡತಿ

ಮರೆತರೆ ನಿನ್ನ ಮಡಿವೆನು ಚಿನ್ನ

ನೋವು ಇಲ್ಲದ ಜೀವನವೇ ಇಲ್ಲ

ಗೆಳತಿ ಕ೦ಬನಿ ಇಲ್ಲದ ಕ೦ಗಳಿಲ್ಲ

ದುಃಖ ಇಲ್ಲದ ಮನಸು ಇಲ್ಲವೇ

ಬರಿ ಸುಖವ ಕ೦ಡ ಮನುಜನಿಲ್ಲ

ನಮ್ ಪ್ರೀತಿ ಸಾಯೋದಿಲ್ಲ,

ಅದಕ್ಕೆ೦ದೂ ಸೋಲೇ ಇಲ್ಲ

ನನ್ನಾಣೆ ನ೦ಬು ನನ್ನ ಉಸಿರೇ

ನನಗಾಗಿ ಜನಿಸಿದೆ ನೀನು,

ನನ್ನೊಳಗೆ ನೆಲೆಸಿದೆ ನೀನು

ನಿನಗಾಗೆ ಬದುಕುವೆ ನಾನೂ

ನೀ ನನ್ನ ಅಗಲಿದ ಆ ಕ್ಷಣವೇ

ನಾ ನಿನಗಿ೦ತ ಮೊದಲೇ ಮಡಿವೆ

ತ೦ದೆಯ ತಾಯಿಯ ಬಿಟ್ಟು ಬ೦ದೆ ನೀ ಗೆಳಯ

ಇಬ್ಬರ ಪ್ರೀತಿಯ ನಾ ಕೊಡುವೆ

ನನ್ನೆದೆ ಗೂಡಲಿ ಬ೦ಧಿಸಿ ನಾ ನಿನ್ನ ಗೆಳಯ

ಸಾವಿಗೂ ಅ೦ಜದೆ ಎದೆ ಕೊಡುವೆ

ಮಗುವ೦ತೆ ಲಾಲಿಸಲೇನು, ಮಡಿಲಲ್ಲಿ ತೂಗಿಸಲೇನು

ಬೆಳದಿ೦ಗಳೂಟ ಮಾಡಿಸಲೇನು

ಕಣ್ಮುಚ್ಚಿ ಕುಳಿತರೆ ನೀನು

ಕಣ್ಣಾಗಿ ಇರುವೆ ನಾನು ಕನಸಲ್ಲೂ ಕಾವಲಿರುವೇ

ಕಣ್ಣೀರು ಬ೦ದರಿಲ್ಲಿ

ಕಣ್ಮರೆಯಾಗುವೆನು, ನನಗೆ ನೀನೆ ಉಸಿರು

ಜನುಮದಾ ಗೆಳತಿ(ಯ) ಉಸಿರಿನಾ ಒಡತಿ(ಯ)

ಮರೆತರೆ ನಿನ್ನ ಮಡಿವೆನು ಚಿನ್ನ

ನನ್ನುಸಿರೇ... ನನ್ನುಸಿರೇ...

ನನ್ನುಸಿರೇ... ನನ್ನುಸಿರೇ...

ಜೊತೆಯಲಿರುವೆ ಎ೦ದೂ... ಜೊತೆಯಲಿರುವೆ

ಎ೦ದೂ... ಜೊತೆಯಲಿರುವೆ ಎ೦ದೂ...

更多Chetan Sosca熱歌

查看全部logo
Janumada Gelathi Chaluvina Chitthara Chetan Sosca - 歌詞和翻唱