menu-iconlogo
huatong
huatong
avatar

Huttidare Kannada Nadalli Huttabeku

Dr.RajKumarhuatong
💝Chetan💝ರಾಗಾರ್ಪಣೆ💝huatong
歌詞
作品
ಏ..ಹೇ…ಬಾಜೋ

ನಾನ್ನ ತಕತ ನಾನ್ನ ತಕತ ನಾನ್ನ ತಕತ

ಹೇ…ಏ..

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಮೇಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಬದುಕಿದು ಜಟಕ ಬಂಡಿ,

ಇದು ವಿಧಿ ಓಡಿಸುವ ಬಂಡಿ

ಬದುಕಿದು ಜಟಕ ಬಂಡಿ,

ವಿಧಿ ಅಲೆದಾಡಿಸುವ ಬಂಡಿ……

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಮೇಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಕಾಶಿಲಿ ಸ್ನಾನ ಮಾಡು

ಕಾಶ್ಮೀರ ಸುತ್ತಿ ನೋಡು

ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು

ಅಜಂತ ಎಲ್ಲೋರವ ಬಾಳಲಿ ಒಮ್ಮೆ ನೋಡು

ಬಾದಾಮಿ ಐಹೊಳೆಯ ಚೆಂದನ ತೂಕಮಾಡು

ಕಲಿಯೋಕೆ ಕೋಟಿ ಭಾಷ ಆಡೋಕೆ ಒಂದೇ

ಭಾಷ…..ಕನ್ನಡಾ..ಕನ್ನಡಾ..ಕಸ್ತೂರಿ ಕನ್ನಡಾ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಮೇಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಬದುಕಿದು ಜಟಕ ಬಂಡಿ,

ಇದು ವಿಧಿ ಓಡಿಸುವ ಬಂಡಿ

ಬದುಕಿದು ಜಟಕ ಬಂಡಿ,

ಇದು ವಿಧಿ ಓಡಿಸುವ ಬಂಡಿ

ಧ್ಯಾನಕ್ಕೆ ಭೂಮಿ ಇದು ಪ್ರೇಮಕ್ಕೆ ಸ್ವರ್ಗ ಇದು

ಸ್ನೇಹಕ್ಕೆ ಶಾಲೆ ಇದು ಜ್ಞಾನಕ್ಕೆ ಪೀಠ ಇದು

ಕಾಯಕ್ಕೆ ಕಲ್ಪ ಇದು ಶಿಲ್ಪಕ್ಕೆ ಕಲ್ಪ ಇದು

ನಾಟ್ಯಕ್ಕೆ ನಾಡಿ ಇದು ನಾದಾಂತರಂಗವಿದು

ಕುವೆಂಪು ಬೇಂದ್ರೆ ಇಂದ ಕಾರಂತ ಮಾಸ್ತಿ ಇದು

ಧನ್ಯವೀ ಕನ್ನಡ ಕಾಗಿನ ಕನ್ನಡಾ..

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಮೇಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಬದುಕಿದು ಜಟಕ ಬಂಡಿ,

ಇದು ವಿಧಿಯೋಡಿಸುವ ಬಂಡಿ

ಬದುಕಿದು ಜಟಕ ಬಂಡಿ,

ವಿಧಿ ದಡ ಸೇರಿಸುವ ಬಂಡಿ

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ

ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲೂ

ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು

ದಾಸರ ಕಂಡ ನಮಗೆ ವೈಕುಂಟ ಯಾಕೆ ಬೇಕು

ಮುಂದಿನ ನನ್ನ ಜನ್ಮ ಬರದಿಟ್ಟನಂತೆ ಬ್ರಹ್ಮ

ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಮೇಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಬದುಕಿದು ಜಟಕ ಬಂಡಿ,

ಇದು ವಿಧಿಯೋಡಿಸುವ ಬಂಡಿ

ಬದುಕಿದು ಜಟಕ ಬಂಡಿ,

ಇದು ವಿಧಿಯೋಡಿಸುವ ಬಂಡಿ

ಏ……ಹೇ……………

ಅ………..ಹಾ…………

更多Dr.RajKumar熱歌

查看全部logo