ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಸುಮಧುರ ಅನುಭವ ನೂರು
ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ