ಸುದೀಪ್ ಜನ್ಮ ದಿನದ ಪ್ರಯುಕ್ತ ಈ ಹಾಡು
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಓ ಹೂವ ಕಂಪು ಪರರಿಗಾಗಿ
ಸಫಲ ಜನ್ಮವು
ಪರರ ಬಾಳು ಬೆಳಗಿದಾಗ
ಬಾಳು ಪೂರ್ಣವು
ಓ ಕಾಲ ಬರೆದ ಹೊಸತು ಹಾಡು
ಹಾಡಲಾರೆನು
ಮನದ ಪುಟದೀ ಬರೆದ ಗೀತೆ
ಮರೆಯಲಾರೆನು
ಎಲ್ಲಿಯ ಬಂದವು ಕಾಣೆ
ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ
ನನ್ನೀ ಈ ಹೃದಯದ ಭಾವ
ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು
ಸುಮಧುರ ಅನುಭವ ನೂರು
ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ
ಓ ಯಾವ ಹೂವು ಯಾರ ಮುಡಿಗೊ
ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ
ನನ್ನ ತೋಟದೀ
ಓ ತಂತಿ ಹರಿದ ವೀಣೆಯಲ್ಲಿ
ಶೃತಿಯ ತಂದಿತು
ನುಡಿಸುವವನು ಸ್ವರವ ಬೆರಸಿ
ಸಾಟಿ ಕಾಣೆನು
ಬಾಳಲಿ ಪಡೆದದು ಏನೋ
ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ
ಮುಂದೆ ತರುವುದು ಏನೋ
ಹೃದಯದಿ ಪ್ರೇಮ ತರಂಗ
ನೀ ಮೀಟಿದೆ
ಬದುಕಿಗೆ ನೂತನ ಅರ್ಥ
ನೀ ನೀಡಿದೆ
ಸುಮಧುರ ಅನುಭವ ನೂರು
ನಾ ನೋಡಿದೆ
ನೆಡೆಯುವ ಮುಂದಿನ ದಾರಿ
ಮರೆ ಎಂದಿದೆ ನಡೆ ಎಂದಿದೆ
ಗುರಿ ತೋರಿದೆ