menu-iconlogo
huatong
huatong
avatar

Ellige Payana Yaavudo Daari

P.b. Sreenivashuatong
pallavanhuatong
歌詞
作品
ಕಥೇ ಮುಗಿಯಿತೇ

ಆರಂಭದಾ ಮುನ್ನ

ಲತೇ ಬಾಡಿ ಹೋಯಿತೇ..

ಹೂವಾಗುವಾ ಮುನ್ನ

ಎಲ್ಲಿಗೇ ಪಯಣ

ಯಾವುದೋ ದಾರಿ

ಏಕಾಂಗಿ ಸಂಚಾರಿ

ಏಕಾಂಗಿ ಸಂಚಾರಿ

ಮಡದಿ ಮಕ್ಕಳು ಸ್ನೇಹಿತರನ್ನು

ಮಣ್ಣಿನ ವಶ ಮಾಡಿ

ನಡೆದಿಹೆ ಇಂದು ಅಂಧನ ರೀತಿ

ಶೋಕದೇ...

ಏನೋ ನಿನ್ನ ಗುರಿ

ಎಲ್ಲಿಗೇ ಪಯಣ

ಸೋಲು ಗೆಲುವು

ಸಾವು ನೋವು

ಜೀವನದುಯ್ಯಾಲೆ

ಸಾಯುವ ಮುನ್ನ

ಜನಿಸಿದ ಮಣ್ಣ

ದರುಶನ ನೀ ಪಡೆದು..

ತಾಯಿಯ ಮಡಿಲ

ಧೂಳಲಿ ಬೆರೆತು

ಶೂನ್ಯದೇ.... ಏ..

ಮುಗಿಸು ನಿನ್ನ ಕತೆ

ಎಲ್ಲಿಗೇ ಪಯಣ...

ಯಾವುದೋ ದಾರಿ...

ಏಕಾಂಗಿ ಸಂಚಾರಿ...

ಏಕಾಂಗಿ ಸಂಚಾರಿ...

ಏಕಾಂಗಿ ಸಂಚಾರಿ...

更多P.b. Sreenivas熱歌

查看全部logo