ಈ ಟ್ರ್ಯಾಕ್ ಗೆ ಆಲಾಪ್ ಧ್ವನಿ ನೀಡಿರುವ
" ರಮ್ಯಾ ಜಾಗೀರ್ ದಾರ್ " ಅವರಿಗೆ
ಧನ್ಯವಾದಗಳು
ಓ ಗುಲಾಬಿಯೇ
ಓ ಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ ಓ ಓ
ಓ ಗುಲಾಬಿಯೇ
ಓ ಹೊ ಗುಲಾಬಿಯೇ
ದ್ವೇಷವಾ ಸಾಧಿಸೆ ಪ್ರೇಮದ ಅಸ್ತ್ರವೇ
ಸೇಡಿನ ಹಾಡಿಗೆ ಹಾಡಿನ ಧಾಟಿಗೆ
ವಿನಯದ ತಾಳವೇ ಭಾವಕೆ ವಿಷದ ಲೇಪವೇ
ಹೆಣ್ಣು ಒಂದು ಮಾಯೆಯ ರೂಪ ಎಂಬಾ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯ ರೂಪ ಎಂದು ಹೇಳಿದೆ
ಯಾವುದು ಯಾವುದು ನಿನಗೆ ಹೋಲುವುದಾವುದು
ಯಾವುದು ಯಾವುದು ನಿನಗೆ ಹೋಲುವುದಾವುದು
ಓ ಗುಲಾಬಿಯೇ
ಓ ಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ ಓ ಓ
ಓ ಗುಲಾಬಿಯೇ
ಓ ಹೊ ಗುಲಾಬಿಯೇ
ಮನ್ನಿಸೂ ಮನ್ನಿಸು ಎಲ್ಲವಾ ಮನ್ನಿಸು
ನೊಂದಿರೋ ಮನಸಿಗೆ ಬೆಂದಿರೊ ಕನಸಿಗೆ
ಮಮತೆಯ ಚಿಮುಕಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೆ ಎಂದು ಹೇಳುವೆ
ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಓ ಗುಲಾಬಿಯೇ....
ಓ ಹೊ ಗುಲಾಬಿಯೇ....
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓ ಓ
ಮುಳ್ಳಿoದ ಬಾಳಂದ ಕೆಡಿಸೋದು ನ್ಯಾಯವೇ
ಓ ಗುಲಾಬಿಯೇ
ಓ ಹೊ ಗುಲಾಬಿಯೇ