ಚಿತ್ರ : ಇಂದ್ರಜಿತ್
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಎಸ್ಪಿ.ಬಿ., ಬಿ.ಆರ್.ಛಾಯ್
F: ಬೆಳ್ಳಿರಥದಲಿ ಸೂರ್ಯ ತಂದ ಕಿರಣ
F: ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
M: ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
F: ಮೇಘ ಶಾಮನ ಮುರುಳಿಲೋಲನ
ಪ್ರೀತಿ ಒಂದು ಕವನ ನುಡಿಸು ಕೊಳಲನು
ನಾ ಬರುವೆ ಹಿಡಿದು ಶೃತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
M: ಹವಳ ಮುತ್ತನು ಕಡಲ ಅಲೆಯನು
ನಿನಗೆ ತರುವೆ ನಾನು
ಸೇರಿ ನಿನ್ನನು
ಮುತ್ತಲ್ಲೇ ಮನೆಯಾ ಕಟ್ಟುವೆನು
ಮುಗಿಲ ಮಿಂಚನೇ
ತಂದಿರಿಸಿ ದೀಪಾ ಹಚ್ಚುವೆನೂ
F: ಕರಗಿದೆ ನಿನ್ನ ಒಲವಿಗೆ
ಹೂ ಹಾಸುವೇ ನಿನ್ನ ಹಾದಿಗೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
M: ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ...ಬಾನಂಚಿನ ಹೊಸ ಗಾನ
F: ಹಗಲು ಇರುಳಲಿ ಬಿಸಿಲು ಮಳೆಯಲಿ
ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ
ಜನುಮ ಜನುಮಕೂ
ನಾ ಬಂದು ಸೇರುವೆನು ನಿನ್ನ
M: ಭೂಮಿ ಬೀರಿದರೂ ಪ್ರಳಯವಾದರೂ
ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ
ಬಾನು ಇಲ್ಲವೇ ನಿನ್ನುಸಿರ
ಕಾಣಲು ಬಲು ಚೆನ್ನ....
F: ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ
M: ನೀ ನನಗೆ ನಾ ನಿನಗೆ ಜೀವನ ನಗುತಲಿದೆ
M/F: ಬೆಳ್ಳಿರಥದಲಿ ಸೂರ್ಯ ತಂದ ಕಿರಣ...
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ.