ಏಕೆ ಹೀಗಾಯ್ತೋ...ನಾನು ಕಾಣೆನು...
ಪ್ರೀತಿ ಮನದಲ್ಲಿ...ಹೇಗೆ ಮೂಡಿತೋ..
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನಾ..
ಜೇನು ಹೀರಿದ ದುಂಬಿಯ ಹಾಗಿದೆ ನನ್ನಾ ಈ ಮನಾ..
ಏಕೆ ಹೀಗಾಯ್ತೋ...ನಾನು ಕಾಣೆನು...
ಪ್ರೀತಿ ಮನದಲ್ಲಿ...ಹೇಗೆ ಮೂಡಿತೋ..
ಆ ನೋಟದಲ್ಲಿ ಅದು ಏನ್ ಇದೆಯೊ..
ತುಟಿ ಅಂಚಿನಲ್ಲಿ ಸವಿ ಜೇನ್ ಇದೆಯೊ..
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನಾ..
ಜೇನು ಹೀರಿದ ದುಂಬಿಯ ಹಾಗಿದೆ ನನ್ನಾ ಈ ಮನಾ..
ನೀ..... ನಗುವಾಗ
ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ..
ನೀ.... ನುಡಿದಾಗ
ಮೊಳದುದ್ದಾ ಜಡೆ ತುಂಬಾ ಮಲ್ಲೆ
ಮುಡಿದ್ದೆನ್ನಾ ಸಳೆದೆ..
ಉಸಿರಾಟ ಮರೆತು ಹೋಯಿತು,
ಬೇರೇನು ಕಾಣದಾಯಿತು..
ನಿನ್ನಲ್ಲಿ ನನ್ನಾ ಈ ಜೀವ ಸೇರಿತು.
ಏಕೆ ಹೀಗಾಯ್ತೋ...ನಾನು ಕಾಣೆನು...
ಪ್ರೀತಿ ಮನದಲ್ಲಿ...ಹೇಗೆ ಮೂಡಿತೋ..
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನಾ..
ಈ..... ಹೊಸದಾದ
ಅನಂದ ತಂದಂತ ಮುತ್ತಿನ ಮುತ್ತನ್ನ ತಂದೆ..
ಆ..... ನೆನಪಲ್ಲೆ
ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ..
ಈ ನಾಡಿ ನಿಂತು ಹೋಯಿತು..
ನಾ ಯಾರೊ ಮರೆತು ಹೋಯಿತು..
ನಿನ್ನಲ್ಲಿ ನನ್ನ ಈ ಜೀವ ಸೇರಿತು..
ಏಕೆ ಹೀಗಾಯ್ತೋ...ನಾನು ಕಾಣೆನು...
ಪ್ರೀತಿ ಮನದಲ್ಲಿ...ಹೇಗೆ ಮೂಡಿತೋ..
ಆ ನೋಟದಲ್ಲಿ ಅದು ಏನ್ ಇದೆಯೊ..
ತುಟಿ ಅಂಚಿನಲ್ಲಿ ಸವಿ ಜೇನ್ ಇದಯೊ..
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನಾ..
ಜೇನು ಹೀರಿದ ದುಂಬಿಯ ಸೇರಿದೆ ನನ್ನಾ ಈ ಮನಾ.