
Cheluva Cheluva
ಚೆಲುವ ಚೆಲುವ
ಬೇಲೂರ ಚನ್ನ ಚೆಲುವಾ..
ಯಾಕೋ ಯಾಕೋ
ನೀ ಕದ್ದೆ ನನ್ನ ಮನವಾ..
ಅಂತರಂಗ ಹಾರಾಡಿದೇ
ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮ....ಅ.ಅ.ಅ
ಚೆಲುವೆ ಚೆಲುವೆ
ಬೇಲೂರ ಚನ್ನ ಚೆಲುವೇ..
ಯಾಕೋ ಯಾಕೋ
ನಿನ್ನ ಮೇಲೆ ನನ್ನ ಮನವೇ..
ಅಂತರಂಗ ಹಾರಾಡಿದೆ
ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ...ಎ.ಎ.ಎ
ಚೆಲುವ ಚೆಲುವ
ಬೇಲೂರ ಚನ್ನ ಚೆಲುವಾ..
ಯಾಕೋ ಯಾಕೋ
ನೀ ಕದ್ದೆ ನನ್ನ ಮನವಾ..
ಮನದ ಬನದ
ಸುಮದಲ್ಲಿ ಚೈತ್ರ ಮೇಳಾ..
ಎದೆಯ ಗುಡಿಯ
ಪದದಲ್ಲಿ ಪ್ರೇಮ ತಾಳ..
ಕಣ್ಣ ಸನ್ನೆಯಲ್ಲಿ..
ಇಂದ್ರಲೋಕ ದೊರೆತಾಗ
ಬೆರಳಿನಾಜ್ಞೆಯಲ್ಲಿ
ಸ್ವರ್ಗಲೋಕ ತೆರೆದಾಗ
ಏನ ಹೇಳಲಿ ಈಗ ನಾ
ಮಾತು ಬಾರದಿದೆ..
ಏನ ಮಾಡಲಿ ಈಗ ನಾ
ಜೀವ ಜಾರುತಿದೆ..
ಅಂತರಂಗ ಹಾರಾಡಿದೇ
ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮ....ಅ.ಅ.ಅ
ಚೆಲುವೆ ಚೆಲುವೆ
ಬೇಲೂರ ಚನ್ನ ಚೆಲುವೇ..
ಯಾಕೋ ಯಾಕೋ
ನಿನ್ನ ಮೇಲೆ ನನ್ನ ಮನವೇ..
ಉರಿಯೊ ಸೂರ್ಯ
ತಂಪಾಗಿ ಕೈಗೆ ಬಂದಾ..
ಹರಿಯೋ ನದಿಯು
ಕಡಲಾಯ್ತು ಪ್ರೇಮದಿಂದಾ..
ಮೊದಲ ನೋಟದಲ್ಲಿ..
ಪೂರ್ವ ಪುಣ್ಯ ಸುಳಿದಾಗ
ಮೊದಲ ಸ್ಪರ್ಶದಲ್ಲಿ..
ಪೂರ್ವ ಜನ್ಮ ಸೆಳೆದಾಗ
ಏನ ನೋಡಲಿ ಈಗ ನಾ
ಲೋಕ ಕಾಣದಿದೆ..
ಏನ ಹೇಳಲಿ ಈಗ ನಾ
ಆಸೆ ಕಾಣುತಿದೆ..
ಅಂತರಂಗ ಹಾರಾಡಿದೇ
ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮ....ಅ.ಅ.ಅ
ಚೆಲುವ ಚೆಲುವ
ಬೇಲೂರ ಚನ್ನ ಚೆಲುವಾ..
ಯಾಕೋ ಯಾಕೋ
ನೀ ಕದ್ದೆ ನನ್ನ ಮನವಾ..
ಅಂತರಂಗ ಹಾರಾಡಿದೆ
ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ...ಎ.ಎ.ಎ
ಚೆಲುವೆ ಚೆಲುವೆ
ಬೇಲೂರ ಚನ್ನ ಚೆಲುವೇ
ಯಾಕೋ ಏನೋ
ನಿನ್ನ ಮೇಲೆ ನನ್ನ ಮನವೇ..