ಚಿತ್ರ : ನಾರಿ ಸ್ವರ್ಗಕ್ಕೆ ದಾರಿ ; ಹಾಡು : ನಿನಗಾಗಿ ನಾನು ನನಗಾಗಿ ನೀನು
ಸಾಹಿತ್ಯ : ಚಿ ಉದಯಶಂಕರ್ ; ಸಂಗೀತ : ವಿಜಯಭಾಸ್ಕರ್
ಮೂಲ ಗಾಯನ : ಎಸ್ ಪಿ ಬಾಲಸುಬ್ರಮಣ್ಯಂ & ವಾಣಿ ಜಯರಾಮ್
ಆ ಬ್ರಹ್ಮ ಬರೆದಾಯಿತು
ನಿನಗಾಗಿ ನಾನು ನನಗಾಗಿ ನೀನು
ಆ ಬ್ರಹ್ಮ ಬರೆದಾಯಿತು
ಮನಸು ಮನಸು ಒಂದಾದ ದಿನವೇ
ಮದುವೆ ನಮಗಾಯಿತು
ನನ್ನಾ ನಿನ್ನಾ ಒಲವಲಿ ಚಂದ್ರ ಕೊಡುವ ತಂಪಿದೆ
ಹೂವು ಎಸೆವ ಕಂಪಿದೆ ಗಾನ ತರುವ ಇಂಪಿದೆ
ಸೇರಿ ನಡೆವ ಪಯಣದಲ್ಲಿ ಸುಖವೇ ತುಂಬಿದೆ
ಸುಖವೇ ತುಂಬಿದೆ.................
ನಿನಗಾಗಿ ನಾನು ನನಗಾಗಿ ನೀನು
ಆ ಬ್ರಹ್ಮ ಬರೆದಾಯಿತು
ಮನಸು ಮನಸು ಒಂದಾದ ದಿನವೇ
ಮದುವೆ ನಮಗಾಯಿತು
ಬಾನಿನಿಂದ ನೀಲಿಯು ಎಂದು ದೂರವಾಗದು
ಹರಿವ ನೀರು ಕಡಲನು ಬೆರೆವ ತನಕ ನಿಲ್ಲದು
ಏನೆ ಬರಲಿ ನಮ್ಮ ಬೆಸುಗೆ ಬೇರೆಯಾಗದು
ಬೇರೆಯಾಗದು..........
ನಿನಗಾಗಿ ನಾನು ನನಗಾಗಿ ನೀನು
ಆ ಬ್ರಹ್ಮ ಬರೆದಾಯಿತು
ಮನಸು ಮನಸು ಒಂದಾದ ದಿನವೇ
ಮದುವೆ ನಮಗಾಯಿತು