ಒಂದು ಪ್ರೇಮ ಪಲ್ಲಕಿಯ ಮೇಲೆ..
ಎರಡು ಹೃದಯದ ಪಯಣ..
ಎರಡು ಹೃದಯಗಳ ಮೇಲೆ..
ಮೂರು ಕನಸಿನ ಕವನ..
ಮೂರು ನೂರು ಕವನ ಹಾಡೊ ನಾಲ್ಕು ಕಣ್ಣಿದೆ
ನಾಲ್ಕು ಕಣ್ಣು ಐದು ಇಂದ್ರಿಯಾನ ಮರೆಸಿದೆ
ಐದು ಆರು ಎಂಟು ಹತ್ತು ಪ್ರೀತಿ ಮೇಲೆ ಪ್ರೀತಿ ಹೊತ್ತು
ಲೆಕ್ಕ ಇರದ ಪ್ರೀತಿ ನಮ್ಮದು....
ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ....
ಪ್ರೀತಿಗೆ ಭಾಷೆ ಇಲ್ಲ ಹಾಡುತ್ತಾರೆ
ಪ್ರೀತಿಗೆ ರೂಪ ಇಲ್ಲ ನೋಡುತ್ತಾರೆ
ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ
ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೆ
ಪ್ರೀತಿಗೆ ಯಾವ ಹೆಸರಿಲ್ಲ ಓ..ಹೋ
ಪ್ರೀತಿನೆ ಹೆಸರೆನ್ನುತ್ತಾರೆ ಓ..ಹೋ
ಸರಿಯಾ....
ಹೆ)ಸರಿ ಸರಿ ಸರಿ ಸರಿ ಸರಿ
ಸರಿಯಾ...
ಸರಿಯಾ ಸರಿಯಾ ಸರಿಯಾ
ಪ್ರೀತಿಗೆ ಯಾವ ಅರ್ಥ ಇಲ್ಲ ಓ..ಹೋ
ಪಂಡಿತರಾಗುತ್ತಾರೆ ಓಹೋ ಓ..ಹೋ
ವಾಡಿಕೆ ಇಲ್ಲದ ಪ್ರೀತಿ ನಮ್ಮದು
ಒಂದು ಪ್ರೇಮ ಪಲ್ಲಕಿಯ ಮೇ..ಲೆ..
ಎರಡು ಹೃದಯದ ಪಯಣ
ಓ. ಹೋ ಓ ಹೋ..
ಓ. ಹೋ ಓ..
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿ ಮಾಡೋ
ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೆ
ಪ್ರೀತಿಗೆ ಕೊಳೆಯು ಇಲ್ಲ ತೊಳೆಯುತ್ತಾರೆ
ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತಾರೆ
ಪ್ರೀತಿಗೆ ಆತುರ ಇಲ್ಲ ಹಿಡಿದೆಳಿತಾರೆ
ಪ್ರೀತಿಗೆ ಯಾವ ಜೋಡಿ ಇಲ್ಲ.. ಓ..ಹೋ
ಪ್ರೀತಿ ಜೋಡಿ ಎಂದೆಬಿಡುತಾ..ರೆ ಓ..ಹೋ
ಸರಿಯಾ....
ಸರಿ ಸರಿ ಸರಿ ಸರಿ ಸರಿ
ಸರಿಯಾ ಸರಿಯಾ ಸರಿಯಾ ಸರಿಯಾ
ಪ್ರೀತಿಗೆ ಯಾವ ದೈವ ಇಲ್ಲ ಓ..ಹೋ
ಪ್ರೀತಿನೆ ದೈವ ಅನ್ನುತ್ತಾರೆ ಓ..ಹೋ
ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದು
ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ