menu-iconlogo
huatong
huatong
avatar

Neen Yello Nan Ale

Spbhuatong
easycon2huatong
歌詞
作品
ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ನಾನಿನ್ನ ಕಣ್ಣಾಗಿ ನೀನಾಡೋ ನುಡಿಯಾಗಿ

ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೆ ....

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ನಾನಿನ್ನ ಕಣ್ಣಾಗಿ ನೀನಾಡೋ ನುಡಿಯಾಗಿ

ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೆ

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

ಬಳಿಯಲೇ ಬಂಗಾರ ಇರುವಾಗ ಅದನ್ನು ನೋಡದೆ

ಅಲೆಯುತ ದಿನ ಬಳಲಿದೆ ಕಣ್ಣೀಗ ತೆರೆಯಿತು

ಬಯಸಿದ ಸೌಭಾಗ್ಯ ಕೈಸೇರಿ ಹರುಷ ಮೂಡಿತು

ಒಲವಿನ ಲೇತು ಚಿಗುರಿತು ಕನಸಿನ್ನೂ ಮುಗಿಯಿತು

ಇನ್ನೆಂದು ನಿನ್ನನ್ನು ಚೆಲುವೆ ಬಿಡಲಾರೆನಾ

ಓ..ಬಾಗಿಲಿಗೆ ಹೊಸಿಲಾಗಿ ತೋರಣದಾ ಹಸಿರಾಗಿ

ಪೂಜಿಸುವ ಹೂವಾಗಿ ಇಂಪಾದ ಹಾಡಾಗಿ

ಮನಸಾಗಿ ಕನಸಾಗಿ ಬಾಳೆಲ್ಲ ಬೆಳಕಾಗಿ ನಾ ಬರುವೆ ......

ನೀನೆಲ್ಲೋ ನಾನಲ್ಲೇ

ಈ ಜೀವ ನಿನ್ನಲ್ಲೇ

ಬದುಕಿನ ಹಾಡಲ್ಲಿ ಜೊತೆಯಾಗಿ ಶ್ರುತಿಯ ಬೆರೆಸುವೆ

ರಾಗದಿ ಹೊಸ ರಾಗದಿ ಇಂಪನ್ನು ತುಂಬುವೆ

ಹೃದಯದ ಗುಡಿಯಲ್ಲಿ ಓ ನಲ್ಲೆ ನಿನ್ನ ಇರಿಸುವೆ

ಪ್ರೀತಿಯ ಸುಮದಿಂದಲಿ ಸಿಂಗಾರ ಮಾಡುವೆ

ಆನಂದ ಹೆಚ್ಚಾಗಿ ಕಣ್ಣೀರು ತುಂಬಿದೆ...

ಓ.ನಿನ್ನೊಡಲ ಉಸಿರಾಗಿ ನಿನ್ನಾಸೆ ಕಡಲಾಗಿ

ಚೆಂದುಟಿಯ ನಗೆಯಾಗಿ ಒಲವೆಂಬ ಸಿರಿಯಾಗಿ

ಜೇನಾಗಿ ಸವಿಯಾಗಿ ಸಂತೋಷ ನಿನಗಾಗಿ ನಾ ತರುವೆ ......

ನೀನೆಲ್ಲೋ ನಾನಲ್ಲೇ

ಈ ಜೀವ ನಿನ್ನಲ್ಲೇ

ನಾನಿನ್ನ ಕಣ್ಣಾಗಿ

ನೀನಾಡೋ ನುಡಿಯಾಗಿ

ಗಿಡವಾಗಿ ಮರವಾಗಿ ನೆರಳಾಗಿ ಜೊತೆಯಾಗಿ ನಾನಿರುವೆ

ನೀನೆಲ್ಲೋ ನಾನಲ್ಲೇ

ಈ ಜೀವ ನಿನ್ನಲ್ಲೇ

ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೇ

更多Spb熱歌

查看全部logo