ಒಲವೇ ನನ್ನೊಲವೇ
ಚಿತ್ರ : ನಿನ್ನೇ ಪ್ರೀತಿಸುವೆ
ಗಾಯಕರು : ರಾಜೇಶ್ ಕೃಷ್ಣನ್
ಹಾಗೂ ಕೆ.ಎಸ್. ಚಿತ್ರ
ಸಂಗೀತ : ರಾಜೇಶ್ ರಾಮನಾಥ್
ಸಾಹಿತ್ಯ : ಕೆ.ಕಲ್ಯಾಣ್
ಒಲವೇ ನನ್ನೊಲವೇ ನನ್ನ ಮೇಲೆ
ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೇ ಹಾಳೆಯು
ಹೃದಯವೆ ಲೇಖನಿ
ಬರೆಯುವೆ ಕರೆಯೋಲೆ
ಒಲವೇ ನನ್ನೊಲವೇ ನನ್ನ ಮೇಲೆ
ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ
ನನಸಾಗಿ ಕೊಡುವೆ ನನಗೇ..
ಹಾಡಿನಂತೆ ಪಲುಕುತಿದೆ
ಅವಳ ಪ್ರತಿ ಹೆಜ್ಜೆ
ಹಂಸದಂತೆ ಕುಲುಕುತಿದೇ
ಅವಳಂದಾದ ಗೆಜ್ಜೆ
ಹುಣ್ಣಿಮೆಯಾ ಉರುಹೊಡೆಯೋ
ಅವನ ಕಿರುನಗೆಯು
ಕತ್ತಲೆಗು ಕಣ್ಣೂ ಬರೆಯೋ..
ಆ ನೋಟವೇ ಕಲೆಯು
ಸಾವಿರ ಶಿಲ್ಪದ ಥಳುಕುಗಳಿಂದ
ಹುಟ್ಟಿತು ಅವಳ ನಡೆ
ಸಾವಿರ ಜೋಗದ ಬಳುಕುಗಳಿಂದ
ಹುಟ್ಟಿತು ಅವಳ ಜಡೆ
ಎಷ್ಟು ಬೆರೆತರೂ ಚೆಲುವು
ಒಲವಿಗಾತುರ
ಒಲವೇ ನನ್ನೊಲವೇ ನನ್ನ ಮೇಲೆ
ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ಹೋಯ್ ಸುಮ್ಮನೆ ನಾನಿದ್ದರೆ
ಕನಸು ಕೊಡುತಾಳೆ
ಕಣ್ಣೆದುರು ನಾ ಬಂದರೆ
ಸುಮ್ಮನಿರುತಾಳೆ
ರೆಪ್ಪೆಗಳ ತುಟಿ ತರೆದು
ಮತ್ತನಿಡುತಾನೆ (ನಗು)
ತುಟಿಗಳ ರೆಪ್ಪೆಯಲಿ
ತುಂಬಿಕೊಳುತಾ..ನೆ
ಕಾರಣವಿಲ್ಲದೆ ಬರದೂ ಪ್ರೀತಿ
ಒಪ್ಪಿಕೊ ಈ ಹೃದಯಾ..
ಶ್ರಾವಣ ಮಾಸಕು ಮಾಗಿಯ ಚಳಿಗು
ಬೆಸುಗೆ ಈ ಸಮಯಾ..
ಎಷ್ಟು ಬೆರೆತರೂ ಒಲವು
ಚೆಲುವಿಗಾತುರ
ಒಲವೇ ನನ್ನೊಲವೇ ನನ್ನ ಮೇಲೆ
ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೇ ಹಾಳೆಯು
ಹೃದಯವೇ ಲೇಖನಿ
ಬರೆಯುವೆ ಕರೆಯೋಲೆ
ಒಲವೇ ನನ್ನೊಲವೇ ನನ್ನ ಮೇಲೆ
ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ
ನನಸಾಗಿ ಕೊಡುವೆ ನನಗೇ..